ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ

New Project (1)
Published on

ಪುತ್ತೂರು ಗ್ರಾಮಾಂತರ: ಈಶ್ವರಮಂಗಲ ಪೇಟೆಯಲ್ಲಿ ಕೂಲಿ ಕಾರ್ಮಿಕನೊಬ್ಬನ್ನು ವ್ಯಕ್ತಿಯೋರ್ವ ಸಾರ್ವಜನಿಕ ಸ್ಥಳದಲ್ಲಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಬಗ್ಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಕಡಂಬಳಿಕೆ ನಿವಾಸಿ ಪುಟ್ಟ ಬೈರ ಅವರ ಪುತ್ರ ರಾಜಕುಮಾರ ಕೆ. ಎಂಬುವರು ಸ್ಥಳೀಯರಾದ ಪ್ರಕಾಶ್ ಮಣಿಯಾಣಿ ವಿರುದ್ಧ ದೂರು ನೀಡಿದ್ದಾರೆ. ರೇಖಾ ಎಂಬುವರ ಮನೆ ಬಳಿ ಕೆಲ ದಿನಗಳ ಹಿಂದೆ ತಾನು ಜೇಸಿಬಿ ಮೂಲಕ ಶೌಚಗುಂಡಿ ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದ ವೇಳೆ ಸ್ಥಳೀಯರಾದ ಪ್ರಕಾಶ್ ಮಣಿಯಾಣಿ ಜಗಳವಾಡಿದ್ದರು. ಈ ವಿಚಾರವನ್ನು ಎಲ್ಲರಿಗೂ ತಿಳಿಸಿದ್ದೇನೆ ಎಂದು ಆರೋಪಿಸಿ ಪ್ರಕಾಶ್ ಮಣಿಯಾಣಿ, ಸೋಮವಾರ ಈಶ್ವರಮಂಗಲ ಪೇಟೆಯಲ್ಲಿ ಹೋಗುತ್ತಿದ್ದ ವೇಳೆ ತನ್ನನ್ನು ತಡೆದು ನಿಲ್ಲಿಸಿ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ರಾಜಕುಮಾರ್ ಸಂಪ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net