ಅಪಾಯಕಾರಿ ಟ್ಯಾಂಕ್ ಕೊನೆಗೂ ತೆರವು

22
Published on

ಕಡಬ: ಕೈೊಲ ಗ್ರಾಮ ಪಂಚಾಯಿತಿ ಅಧೀನದಲ್ಲಿ, ಕೊಲ ಜನತಾ ಕಾಲನಿಗೆ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್ ಕುಸಿತವಾಗುವ ರೀತಿಯಲ್ಲಿ ಅಪಾಯ ಸ್ಥಿತಿಯಲ್ಲಿದ್ದನ್ನು ಕೊನೆಗೂ ತೆರವುಗೊಳಿಸಲಾಯಿತು.

1996ರಲ್ಲಿ ವಿಶ್ವ ಬ್ಯಾಂಕ್ ಕುಡಿಯುವ ನೀರು ಯೋಜನೆ ಮೂಲಕ ನಿರ್ಮಾಣವಾದ ಈ ಟ್ಯಾಂಕ್ 50 ಸಾವಿರ ಲೀಟರ್ ಸಾಮರ್ಥ್ಯವನ್ನು ಹೊಂದಿತ್ತು. ಕೊಲ ಜನತಾ ಕಾಲನಿ ಮತ್ತು ಪರಿಸರದ ಸುಮಾರು 40ಕ್ಕೂ ಅಧಿಕ ಮನೆಗಳಿಗೆ ಈ ಟ್ಯಾಂಕ್ ಮೂಲಕವೇ ನೀರು ಸರಬರಾಜು ಆಗುತ್ತಿತ್ತು. ಟ್ಯಾಂಕ್‌ನ ಬುಡದಿಂದಲೇ ಧರೆ ಇದ್ದು, ದೂರದಲ್ಲಿದ್ದ ಧರೆ ಮನೆ ನಿರ್ಮಾಣ ಆಗುತ್ತಿದ್ದಂತೆ ಮಣ್ಣು ತೆಗೆದ ಕಾರಣದಿಂದಾಗಿ ಧರೆ ಟ್ಯಾಂಕ್‌ನ ಸನಿಹಕ್ಕೆ ಬಂದು ನಿಂತಿತ್ತು. ಧರೆ 15 ಅಡಿ ಎತ್ತರದಲ್ಲಿದ್ದು, ಮತ್ತು ಟ್ಯಾಂಕ್‌ನಿಂದ ಕೇವಲ 8 ಅಡಿ ತನಕ ಕುಸಿತವಾಗಿತ್ತು. ಆಗಾಗ್ಗೆ ಸುರಿಯುತ್ತಿದ್ದ ಭಾರಿ ಮಳೆಗೆ ಕುಸಿದು ಬೀಳುವ ಹಂತದಲ್ಲಿದ್ದು, ಈ ಟ್ಯಾಂಕ್‌ನ ಅಡಿಯಲ್ಲಿ 10ಕ್ಕೂ ಅಧಿಕ ಮನೆಗಳಿದ್ದು, ಮನೆ ಮಂದಿಯನ್ನು ಆತಂಕಕ್ಕೆ ಒಳಪಡಿಸಿತ್ತು.

ಇದರ ಅಪಾಯದ ಬಗ್ಗೆ ಪಂಚಾಯಿತಿ ಆಡಳಿತ, ಕಂದಾಯ ಇಲಾಖೆಗೆ ದೂರು ಸಲ್ಲಿಕೆಯಾಗಿತ್ತು. ಪಂಚಾಯಿತಿ ಇದರ ತೆರವಿಗೆ ಟೆಂಡರು ಕರೆದಿದ್ದು, ಅದರಂತೆ ಇದರ ತೆರವು ಕಾರ‌್ಯ ತಿಂಗಳ ಹಿಂದೆ ಆರಂಭವಾಗಿ ಇದೀಗ ಪೂರ್ಣ ಪ್ರಮಾಣದಲ್ಲಿ ತೆರವು ಕಾರ‌್ಯ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net