ಚಿಂಚೋಳಿ ತಾಲೂಕಿನ ಕುಸರಂಪಳ್ಳಿಯಲ್ಲಿ 2.29 ಲಕ್ಷ ರೂ. ಜಪ್ತಿ

1604 Chincholi 01
ಚಿಂಚೋಳಿ ತಾಲೂಕಿನ ಕುಸರಂಪಳ್ಳಿ ಚೆಕ್‌ಪೋಸ್ಟ್ ಬಳಿ ಎಫ್‌ಎಸ್‌ಟಿ ತಂಡದ ಅಧಿಕಾರಿಗಳಾದ ಪ್ರಭುಲಿಂಗ ವಾಲಿ, ಜಗನ್ನಾಥ ಚಟ್ನಳ್ಳಿ ದಾಖಲೆಯಿಲ್ಲದ ಹಣವನ್ನು ವಶಕ್ಕೆ ಪಡೆದಿರುವುದು.
Published on


ಚಿಂಚೋಳಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ೨.೨೯ ಲಕ್ಷ ರೂ.ಗಳನ್ನು ಕುಸರಂಪಳ್ಳಿ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಉಡಮನಳ್ಳಿಯಿಂದ ಚಿಂಚೋಳಿಗೆ ಬರುತ್ತಿದ್ದ ದ್ವಿಚಕ್ರ ವಾಹನವೊಂದನ್ನು ಪರಿಶೀಲಿಸಿದಾಗ ಬ್ಯಾಗ್‌ನಲ್ಲಿ ೨,೨೯,೧೫೦ ರೂ.ಗಳು ದೊರೆತಿವೆ. ಬ್ಯಾಗ್ ಹೊಂದಿದ್ದ ವಿಕಾಸ ನೀಲಕಂಠರಾವ ಅವರನ್ನು ವಿಚಾರಿಸಿದಾಗ ಯಾವುದೇ ದಾಖಲೆ ಇಲ್ಲದಿರುವುದು ಸಾಬೀತಾಗಿದೆ. ಹಣವನ್ನು ಜಪ್ತಿ ಮಾಡಿಕೊಂಡು, ಮುಂದಿನ ಕ್ರಮಕ್ಕಾಗಿ ಸಹಾಯಕ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಎಫ್‌ಎಸ್‌ಟಿ ತಂಡದ ಅಧಿಕಾರಿಗಳಾದ ಪ್ರಭುಲಿಂಗ ವಾಲಿ, ಜಗನ್ನಾಥ ಚಟ್ನಳ್ಳಿ, ಎಸ್.ಎಸ್.ಟಿ ತಂಡದ ಮುಖ್ಯಸ್ಥ ಅಬ್ದುಲ್ ಜಾವೀದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net