ಗೇರು ಫಲ ಹಲಸಿನ ಮರದಲ್ಲಿ!

Grapefruits in a jack-fruit tree
Published on

ಅಂಕೋಲಾ: ಗೇರು ಮಾದರಿಯ ಫಲ ಹಲಸಿನ ಮರದಲ್ಲಿ ಬಿಟ್ಟು ಅಚ್ಚರಿ ಮೂಡಿಸಿದೆ.

ಅಂಕೋಲಾ ಪಟ್ಟಣದ ಪಿಎಂ ಹೈಸ್ಕೂಲ್ ಸಮೀಪ ತೋಟವೊಂದರಲ್ಲಿ ಬಿಟ್ಟ ಹಲಸಿನ ಕಾಯಿಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ.

ಎಂ.ಎಸ್.ಭಂಡಿಕಟ್ಟೆ ಅವರ ಕಂಪೌಂಡ್‌ನಲ್ಲಿ ಸುಮಾರು 70 ವರ್ಷದಿಂದಲೂ ಇರುವ ಹಲಸಿನ ಮರ ಇದಾಗಿದೆ.

ಇದರಲ್ಲಿ 50 ಕ್ಕೂ ಹೆಚ್ಚು ಕಾಯಿಗಳಿದ್ದು, ಅವು ಸಾಮಾನ್ಯ ಹಲಸಿನ ಕಾಯಿಯಂತೆ ಕಾಣುತ್ತಿವೆ.

ನೆಲದಿಂದ ಅಡಿ ಎತ್ತರದಲ್ಲಿ ಬಿಟ್ಟ ನಾಲ್ಕೈದು ಕಾಯಿಗಳು ಪಕ್ಕಾ ಗೇರು ಫಲದಂತೆ ಕಾಣುತ್ತಿವೆ.

ಮೇಲ್ಗಡೆ ತೊಟ್ಟಿಗೆ ಜೋತು ಬಿದ್ದ ಗೇರು ಕಾಯಿ ಅದರ ಕೆಳಗೆ ಬೀಜ ಇರುವಂತೆ ಹಲಸಿನ ಕಾಯಿಯೇ ರೂಪುಗೊಂಡಿದೆ. ಗೇರು ಫಲಕ್ಕಿಂತ ಸ್ವಲ್ಪ ದೊಡ್ಡದಿದೆ.

ಇದೇ ಮೊದಲ ಬಾರಿಗೆ ಈ ರೀತಿ ಕಾಯಿ ಬಂದಿದೆ. ನೋಡಿ ಅಚ್ಚರಿಯಾಗಿದೆ ಎನ್ನುತ್ತಾರೆ ಮನೆಯ ಮೇಲ್ವಿಚಾರಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net