

ಕಾಸರಗೋಡು: ಪೆರ್ಮುದೆ ನಿವಾಸಿ, ಗಲ್ಫ್ನಲ್ಲಿ ಉದ್ಯೋಗಿಯಾಗಿರುವ ರಫೀಕ್ ಎಂಬುವರ ಮನೆಗೆ ಸೋಮವಾರ ರಾತ್ರಿ ಕಳ್ಳರು ನುಗ್ಗಿ 30 ಸಾವಿರ ರೂ. ಹಾಗೂ ಚೆಕ್ ಪುಸ್ತಕ ಕಳವು ಮಾಡಿದ್ದಾರೆ. ಈ ಕುರಿತು ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಫೀಕ್ ಅವರ ಪತ್ನಿ ಶಮ್ನಾ ಘಟನೆ ನಡೆದ ದಿನ ಪೆರ್ಮುದೆ ಮಸೀದಿಗೆ ತೆರಳಿದ್ದು, ಬಳಿಕ ತನ್ನ ಸಹೋದರಿ ಮನೆಗೆ ತೆರಳಿದ್ದರು. ಮರುದಿನ ವಾಪಸಾದಾಗ ಮನೆಯ ಮುಂದಿನ ಬಾಗಿಲು ಒಡೆದು ಕೃತ್ಯ ನಡೆಸಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.