ಅನಿಲ್ ಪೈಪ್ ಅಗೆತ ಪಿಡಬ್ಲೂಡಿ ಗುತ್ತಿಗೆದಾರರ ವಿರುದ್ಧ ದೂರು

FIR-2
Published on

ಕಲಬುರಗಿಯಕುಸನೂರ ರಸ್ತೆಯಲ್ಲಿರುವ ಯಮುನಾ ನಗರದ ನವಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಬಳಿಯಲ್ಲಿ ಹಾದು ಹೋಗಿರುವ ಎಜಿಪಿ ಸಿಟಿ ಗ್ಯಾಸ್ ಕಂಪನಿಯ ಅಡುಗೆ ಅನಿಲ ಸರಬರಾಜು ಮಾಡುವ ಪೈಪ್‌ಲೈನ್‌ದಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರು ಮಾಹಿತಿ ಅನ್ಯ ಕೆಲಸಕ್ಕಾಗಿ ನೆಲ ಅಗೆಯುವಾಗ ಅನಿಲ್ ಪೈಪ್‌ಗಳಿಗೆ ಧಕ್ಕೆ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯ ಠಾಣೆಗೆ ಗ್ಯಾಸ್ ಕಂಪನಿಯ ರಂಗರಾಜನ್ ಶೇಷಾದ್ರಿ ದೂರು ನೀಡಿದ್ದಾರೆ. ಗುತ್ತಿಗೆದಾರರು ಕಂಪನಿಗೆ ಮಾಹಿತಿ ನೀಡದೆ ಪೈಪ್ ಲೈನ್ ಅಗೆದಿದ್ದರಿಂದ ಗ್ಯಾಸ್ ಸೋರಿಕೆಯಾಗಿದೆ. ಇದರಿಂದಾಗಿ ಕೂಡಲೇ ಸರಬರಾಜು ನಿಲ್ಲಿಸಲಾಯಿತು. ಗುತ್ತಿಗೆದಾರ ಫಿರೋಜ್ ಕನ್ಸ್ಲ್‌ಟೆನ್ಸಿಯವರ ನಿರ್ಲಕ್ಷÈದಿಂದ ಗ್ಯಾಸ್ ಪೈಪ್‌ಗೆ ಹಾನಿಯಾಗಿದೆ ಎಂದು ದೂರಲಾಗಿದೆ. ==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net