ಮೋದಿ ಬಗ್ಗೆ ಅವಹೇಳನ: ಕಾಂಗ್ರೆಸ್ ಟ್ವಿಟರ್ ಖಾತೆ ವಿರುದ್ಧ ಎಫ್‌ಐಆರ್

Modi 7 may 20
Published on

ಸಾಗರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟರ್‌ನಲ್ಲಿ ಅವಹೇಳನಕಾರಿ ಚಿತ್ರ ಬರಹ ಹಾಕುತ್ತಿರುವ ಕಾಂಗ್ರೆಸ್‌ನ ಟ್ವಿಟರ್ ಖಾತೆ ನಿರ್ವಾಹಕರು, ಅಧ್ಯಕ್ಷರು ಮತ್ತು ಸಂಬಂಧಪಟ್ಟವರ ವಿರುದ್ಧ ಸಾಗರದ ವಕೀಲ ಕೆ.ವಿ. ಪ್ರವೀಣ್ ಬುಧವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟ್ವಿಟರ್ ಖಾತೆಯಲ್ಲಿ ಮೇ 11ರಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಪ್ಪು ಸಂದೇಶ ಹಾಕಲಾಗಿದೆ. ಕರೊನಾ ಸಂದರ್ಭದಲ್ಲಿ ಪ್ರಧಾನಿ ಪಿಎಂ ಕೇರ್ಸ್‌ ಫಂಡ್ ಹಣವನ್ನು ಸದುಪಯೋಗ ಮಾಡುತ್ತಿಲ್ಲ. ಪಿಎಂ ಕೇರ್ಸ್‌ ಫ್ರಾಡ್ ಆಗಿದೆ ಎಂದು ಟ್ವೀಟ್‌ನಲ್ಲಿ ಚಿತ್ರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪಿಎಂ ಕೇರ್ಸ್‌ ಫಂಡ್ ಹಣ ಪಿಎಂ ಅವರ ವೈಯಕ್ತಿಕ ಕೇರ್ಸ್‌ ಫಂಡ್ ಆಗಿದೆ. ಸಂಗ್ರಹವಾದ ಹಣವನ್ನು ಜನಸಾಮಾನ್ಯರಿಗೆ ಬಳಸುತ್ತಿಲ್ಲ. ವಿದೇಶ ಪ್ರಯಾಣಕ್ಕೆ ಬಳಸುತ್ತಿದ್ದಾರೆ ಎಂದೂ ಟ್ವಿಟರ್​‌ನಲ್ಲಿ ಬರೆಯಲಾಗಿದೆ.

ಪಿಎಂ ಕೇರ್ ಫ್ರಾಡ್ ಶೀರ್ಷಿಕೆಯೊಂದಿಗೆ ಪ್ರಧಾನಿ ವಿರುದ್ಧ ಅವಹೇಳನಕಾರಿ ಗಾಳಿ ಸುದ್ದಿಯನ್ನು ಕಾಂಗ್ರೆಸ್ ಖಾತೆಯಲ್ಲಿ ಹರಿಬಿಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net