More

    ತಂಗಿ ಮಗನನ್ನೇ ಕರೆಸಿಲ್ಲ ನಾನು: ಸಚಿವ ನಾರಾಯಣಗೌಡ ಅಳಲು

    ಮಂಡ್ಯ: ಮುಂಬೈನಿಂದ ಮಂಡ್ಯಕ್ಕೆ ನಾನು ಯಾರನ್ನೂ ಕರೆಸಿಲ್ಲ. ಸ್ವಂತ ತಂಗಿ ಮಗನನ್ನೇ ನಾನು ಊರಿಗೆ ಕರೆಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ನಾರಾಯಣಗೌಡ ಹೇಳಿದ್ದಾರೆ. ಅವರು ಇಂದು ಚುಂಚನಗಿರಿ ಮೆಡಿಕಲ್ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

    ‘‘ಮಂಡ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕರೊನಾ ಹರಡಲು ಮುಂಬೈನಿಂದ ಬಂದಿರುವವರು ಕಾರಣರಾಗಿದ್ದು, ಅವರ ವಾಪಸಾತಿ ಹಿಂದೆ ಸಚಿವರ ಕೈವಾಡ ಇದೆ’’ ಎಂಬ ಆರೋಪಗಳ ಹಿನ್ನೆಲೆಯಲ್ಲಿ ನಾರಾಯಣಗೌಡರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಇದನ್ನೂ ಓದಿ: ಪ್ರಧಾನಮಂತ್ರಿ ವಯವಂದನಾ ಯೋಜನೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ

    ‘‘ಜಿಲ್ಲೆಗೆ ಮುಂಬೈನಿಂದ ಸಾವಿರಾರು ಜನ ಬಂದಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಅವರು ಈ ನೆಲದ ಜನ. ಅವರಿಗೆ ಇಲ್ಲೆ ಕ್ವಾರಂಟೈನ್ ಸೌಲಭ್ಯ ನೀಡೋದು ನಮ್ಮ ಕರ್ತವ್ಯ.ಮಂಡ್ಯ ಜಿಲ್ಲೆ ನನ್ನ ಜನ್ಮ ಭೂಮಿ, ಈ ಭೂಮಿಯ ಬಗ್ಗೆ ಅಭಿಮಾನ ಹಾಗೂ ಪ್ರೀತಿ ಇದೆ. ಅಲ್ಲದೆ ನನ್ನ ಕುಟುಂಬದ ಕೆಲವರೂ ಭೇಟಿ ಮಾಡದೇ ಅವರನ್ನು ಕ್ವಾರಂಟೈನ್ ಆಗಿ ಇದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ ಸೇವಾ ಸಿಂಧುವಿನಲ್ಲಿ ಅರ್ಜಿಗಳನ್ನು ಹಾಕಿದ ಮುಂಬಯಿವಾಸಿಗಳಿಗೆ ಇಲ್ಲಿಗೆ ಬರಲು ಅವಕಾಶ ಕಲ್ಪಿಸಲಾಗಿದೆ’’ ಎಂದು ಸಚಿವರು ತಿಳಿಸಿದರು.

    ‘‘ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಮುಂಬೈಯಿಂದ ಹಂತ ಹಂತವಾಗಿ ಬಿಡಲು ಮನವಿ ಮಾಡಿದ್ದು ಮಂಡ್ಯ ಜಿಲ್ಲೆಯಲ್ಲಿ ಇನ್ನೂ ಎರಡು ಸಾವಿರ ಜನಕ್ಕೆ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ. ಹಾಗಂತ ಜನ ಆತಂಕಗೊಳ್ಳೋದು ಬೇಡ. ಇನ್ನೂ ಎರಡು ಸಾವಿರ ಜನರಿಗೆ ಕ್ವಾರಂಟೈನ್ ಮಾಡುವ ಸಾಮರ್ಥ್ಯ ಇದೆ ಎಂದಷ್ಟೇ ನನ್ನ ಹೇಳಿಕೆಯ ಅರ್ಥ’’ ಎಂದರು.

    ಮನೆಮನೆಗಳ ಆಹಾರೋದ್ಯಮಕ್ಕೆ 10,000 ಕೋಟಿ ರೂಪಾಯಿ ಯೋಜನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts