More

    ಕಾಮಗಾರಿ ಗುಣಮಟ್ಟದಿಂದಿರಲು ಸಚಿವ ನಾರಾಯಣಗೌಡ ಸೂಚನೆ

    ಕೊಪ್ಪಳ: ಖೇಲೋ ಇಂಡಿಯಾ ಯೋಜನೆಯಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಕೈಗೊಂಡಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ. ಇಲ್ಲದಿದ್ದರೆ, ಕ್ರಮ ಜರುಗಿಸಬೇಕಾಗುತ್ತದೆ ಎಂದು ಯುವಸಬಲಿಕರಣ ಕ್ರೀಡಾ ಹಾಗೂ ರೇಷ್ಮೆ ಸಚಿವ ಡಾ.ನಾರಾಯಣಗೌಡ ಎಚ್ಚರಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರೇಷ್ಮೆ ಹಾಗೂ ಕ್ರೀಡಾ ಇಲಾಖೆ ಪ್ರಗತಿಪರಿಶೀಲ ಸಭೆಯಲ್ಲಿ ಮಾತನಾಡಿದರು. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ. ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣಗಳಲ್ಲಿ ಇಲಾಖೆ ಕಚೇರಿ ಆರಂಭಕ್ಕೆ ಮೂಲಸೌಕರ್ಯ ಒದಗಿಸಲಾಗುವುದು. ಶಿಥಿಲಗೊಂಡ ಕಟ್ಟಡ ರಿಪೇರಿ ಮಾಡಿಸಿ. ತಾಲೂಕು ಕ್ರೀಡಾಂಗಣಕ್ಕೆ ಅವಶ್ಯವಿರುವ ಸಿಬ್ಬಂದಿ ನೇಮಿಸಲಾಗುವುದು. ಕಾಮಗಾರಿಯಲ್ಲಿ ಲೋಪ-ದೋಷವಾದರೆ, ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಕೊಪ್ಪಳದಲ್ಲಿ ರೇಷ್ಮೆ ಸಂಸ್ಕರಣ ಘಟಕವಿಲ್ಲ. ಹೀಗಾಗಿ ಬೆಳೆಗಾರರು ಶಿರಹಟ್ಟಿ ಅಥವಾ ರಾಮನಗರಕ್ಕೆ ತೆರಳುತ್ತಿದ್ದಾರೆ. ಕೂಡಲೇ ಘಟಕ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಿ. ನರೇಗಾದಡಿ ರೇಷ್ಮೆ ಸಾಕಣೆ ಕೇಂದ್ರ ಸ್ಥಾಪನೆಗಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

    ಜಿಲ್ಲೆಯಲ್ಲಿ 480 ಹೆಕ್ಟರ್ ರೇಷ್ಮೆ ಕ್ಷೇತ್ರವಿದೆ. ಈ ವರ್ಷ 100 ಹೆಕ್ಟರ್ ವಿಸ್ತರಣೆ ಗುರಿ ಇದೆ. ಅದನ್ನು ಪೂರ್ಣಗೊಳಿಸಿ. ಪ್ರತಿ ತಿಂಗಳು 15-20 ಟನ್ ರೇಷ್ಮೆ ಗೂಡು ಉತ್ಪಾದನೆಯಾಗುತ್ತಿದ್ದು, ಇಳುವರಿ ಹೆಚ್ಚಿಸಿ. ಉತ್ತಮ ದರವಿದ್ದು, ರೈತರಿಗೆ ಅನುಕೂಲವಾಗಲಿದೆ. 1.35 ಲಕ್ಷ ಬೆಳೆಗಾರರಿಗೆ ಇಲಾಖೆಯಿಂದ ಕಾರ್ಡ್ ವಿತರಿಸಲಾಗುತ್ತಿದೆ. ಇದರಿಂದ ಪೊಲೀಸರು ರಸ್ತೆಗಳಲ್ಲಿ ಅಡ್ಡ ಹಾಕಿ, ಅನವಶ್ಯಕ ಕಿರಿಕಿರಿ ನೀಡುವುದು ತಪ್ಪಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts