

ಭಟ್ಕಳ: ತಾಲೂಕಿನ ತಲಾಂದ ಗ್ರಾಮದ ರುದ್ರಭೂಮಿ ಪಕ್ಕದ ಅರಣ್ಯ ಪ್ರದೇಶದಲ್ಲಿ ಗುರುವಾರ ರಾತ್ರಿ ಜೂಜಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣಾ ಪೊಲೀಸರು 8 ಜನರ ಮೇಲೆ ಕೇಸ್ ದಾಖಲಿಸಿದ್ದಾರೆ.
ತಲಾಂದ ಗ್ರಾಮದ ಜಗದೀಶ ಮಾಸ್ತಪ್ಪ ನಾಯ್ಕ, ವಸಂತ ಮಾಸ್ತಪ್ಪ ನಾಯ್ಕ, ಅರುಣ ಮಂಜುನಾಥ ನಾಯ್ಕ, ಮಾದೇವ ನಾಗಪ್ಪ ನಾಯ್ಕ, ವಿನೋದ ಮಂಜಯ್ಯ ನಾಯ್ಕ, ದೇವೇಂದ್ರ ಸೋಮಯ್ಯ ಗೊಂಡ, ಶ್ರೀನಿವಾಸ ನಾಗಪ್ಪ ನಾಯ್ಕ ಹಾಗೂ ಕೃಷ್ಣ ಸುಕ್ರ ನಾಯ್ಕ ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಿ ಬಿಡುಗಡೆ ಮಾಡಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.