ಹೃದಯ, ಶ್ವಾಸಕೋಶದ ಪುನರುಜ್ಜೀವ ಪ್ರಾತ್ಯಕ್ಷಿಕೆ

blm-2
Published on

ಶಿರ್ವ: ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ವಿಶ್ವ ರೆಡ್‌ಕ್ರಾಸ್ ದಿನದ ಅಂಗವಾಗಿ ಹೃದಯ ಮತ್ತು ಶ್ವಾಸಕೋಶದ ಪುನರುಜ್ಜೀವ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.

ಹೃದಯ ಮತ್ತು ಶ್ವಾಸಕೋಶದ ಪುನರುಜ್ಜೀವ ತಂತ್ರಗಳ ನೇರ ಪ್ರದರ್ಶನವನ್ನು ಇಂಜಿನಿಯರಿಂಗ್ ವಿಭಾಗ, ಎಂಬಿಎ ವಿಭಾಗ ಮತ್ತು ನಿರಾಮಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಎನ್‌ಎಸ್‌ಎಸ್ ಸಂಯೋಜಕರನ್ನು ಸಂಸ್ಥೆ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಅಭಿನಂದಿಸಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್.ಐತಾಳ್, ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕ ಸಚಿನ್ ಪ್ರಭು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net