ಜಿಲ್ಲೆಯಲ್ಲಿ ಕೌಟುಂಬಿಕ ಸಂಬಂಧಕ್ಕೆ ಮನ್ನಣೆ ಸಂತಸಕರ

udp-2-vakilara sangha
Published on

ಉಡುಪಿ: ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ಕೇವಲ 240 ಪ್ರಕರಣಗಳಿವೆ. ಇತರೆಡೆಗೆ ಹೋಲಿಸಿದರೆ ಇಲ್ಲಿನ ಜನರು ಕೌಟುಂಬಿಕ ಸಮಸ್ಯೆ ನ್ಯಾಯಾಲಯದವರೆಗೆ ತಂದಿಲ್ಲ ಎಂಬುದು ಅರಿವಾಗುತ್ತದೆ. ಇದು ಈ ಭಾಗದ ಸಂಸತಿಯ ಪ್ರತಿಬಿಂಬವಾಗಿದ್ದು, ಕೌಟುಂಬಿಕ ಸಂಬಂಧಕ್ಕೆ ಮನ್ನಣೆ ನೀಡಿರುವುದು ಸಂತಸದ ವಿಚಾರ ಎಂದು ಕೌಟುಂಬಿಕ ನ್ಯಾಯಾಲಯದ ನೂತನ ಪ್ರಧಾನ ನ್ಯಾಯಾಧೀಶೆ ಕೆ.ಎಸ್​ ಜ್ಯೋತಿಶ್ರೀ ಅಭಿಪ್ರಾಯಪಟ್ಟರು.

ಸೋಮವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ನ್ಯಾಯಧೀಶರ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಡುಪಿಗೆ ವರ್ಗಾವಣೆಗೊಂಡು ಆಗಮಿಸಿದ ಪ್ರಧಾನ ಸಿವಿಲ್​ ನ್ಯಾಯಾಧೀಶ ಗಗನ್​ ಎಂ.ಆರ್​., ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ನಾಗೇಶ್​ ಎಂ. ಮಾತನಾಡಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್​.ಎಸ್​.ಗಂಗಣ್ಣನವರ್​ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ನಾಗರಾಜ್​ ಮಾತನಾಡಿದರು. ಪೋಕ್ಸೊ ನ್ಯಾಯಾಲಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ್​ ಸುವರ್ಣ, ಪ್ರಧಾನ ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗು ಸಿಜೆಎಂ ಪುರುಷೋತ್ತಮ್​, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್​ ನ್ಯಾಯಾಧೀಶ ಸಂತೋಷ್​ ಶ್ರೀವಾಸ್ತವ್​, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್​ ಪಿ.ಆರ್​., ಎರಡನೇ ಹೆಚ್ಚುವರಿ ಸಿವಿಲ್​ ನ್ಯಾಯಾಧೀಶ ಅಬುತಾಹಿರ್​ ಉಪಸ್ಥಿತರಿದ್ದರು. ಇಂಚರ ಪ್ರಾರ್ಥಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವಿಣ್​ ಕುಮಾರ್​ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ರಾಜೇಶ್​ ವಂದಿಸಿದರು. ವಕೀಲೆ ಸಹನಾ ಕುಂದರ್​ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net