

ಶಿರಾ: ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಪಲ್ಟಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ನೀರು ಪಾಲಾಗಿದ್ದಾರೆ. ಮಾವ, ಅತ್ತೆ, ಪತ್ನಿ ಸಾವನ್ನಪ್ಪಿದ್ದರೆ ಗಂಡ ಪ್ರಾಣಪಾಯದಿಂದ ಪಾರಾಗಿದ್ದಾರೆ.
ದೊಡ್ಡಣ್ಣ, ಸಣ್ಣಮ್ಮ, ಯಮುನಾ ಮೃತ ದುರ್ದೈವಿಗಳು. ಪ್ರವೀಣ್ ಪ್ರಾಣಪಾಯದಿಂದ ಪಾರಾಗಿದ್ದು ಯಮುನಾ ಪ್ರವೀಣ್ ಪತ್ನಿ ಯುಮುನಾ, ಮಾವ ದೊಡ್ಡಣ್ಣ ಹಾಗೂ ಅತ್ತೆ ಸಣ್ಣಮ್ಮ ನೀರಿನಲ್ಲಿ ಮುಳುಗಿ ಹೋಗಿದ್ದಾರೆ.
ಮೃತರೆಲ್ಲರು ಶಿರಾ ತಾಲೂಕಿನ ವೀರಾಪುರ ಗ್ರಾಮದವರು. ಬುಕ್ಕಾಪಟ್ಟಣದ ಬಳಿಯಿರುವ ರಾಮಲಿಂಗಪುರದ ಕೆರೆಗೆ ಕಾರು ಪಲ್ಟಿ ಹೊಡೆದಿದ್ದು ಬೆಳಗಿನಜಾವ ವೀರಾಪುರದಿಂದ ಧರ್ಮಸ್ಥಳಕ್ಕೆ ಹೊರಟಿದ್ದಾಗ ಈ ಘಟನೆ ನಡೆದಿದೆ. ಮಾರುತಿ ಆಲ್ಟೋ ಕಾರಿನಲ್ಲಿ ಹೊರಟ್ಟಿದ್ದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ನುಗ್ಗಿದೆ ಎನ್ನಲಾಗಿದೆ. ಸ್ಥಳಕ್ಕೆ ಶಿರಾ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.