ಕಾರು ಪಲ್ಟಿಯಾಗಿ ಇಬ್ಬರು ಸಾವು

web 1
Published on

ನಾಲ್ವರಿಗೆ ಗಾಯ, ಮಕ್ಕಳು ಅಪಾಯದಿಂದ ಪಾರು

ಚಿಂತಾಮಣಿ: ತಾಲೂಕಿನ ಮುರಗಮಲ್ಲ ರಸ್ತೆಯ ಕಾಗತಿ ಗ್ರಾಮದ ಸಮೀಪ ಗುರುವಾರ ಚಾಲಕನ ನಿಯಂತ್ರಣದ ತಪ್ಪಿದ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

ಬೆಂಗಳೂರಿನ ಗುರಪ್ಪನಪಾಳ್ಯದ ವಾಹಿದ್ (55), ಸಕ್ಲೈನ್ (33) ಮೃತರು. ಸರ್ದಾರ್(50), ನಗೀನಾ(45), ಶೋಯೆಬ್ (30), ಅಮರೀನ್(25) ಗಾಯಾಗೊಂಡಿದ್ದು, ಹಸನೈನ್(3), ಮರಿಯಮ್(2)ಗೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನಿಂದ ಮುರಗಮಲ್ಲ ದರ್ಗಾಕ್ಕೆ ಕಾರಿನಲ್ಲಿ ಬಂದಿದ್ದ ಅವರು, ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬೆಂಗಳೂರಿನಗೆ ವಾಪಸಾಗುತ್ತಿದ್ದಾಗ ಕಾಗತಿ ಮತ್ತು ಕೊಂಗತಿಮ್ಮನಹಳ್ಳಿ ರಸ್ತೆ ಮಧ್ಯೆ ಅಪಘಾತ ಸಂಭವವಿಸಿದೆ. ಮುರುಗಮಲ್ಲ ಹೊರಠಾಣೆ ಎಎಸ್‌ಐ ಚಂದ್ರ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿವೈಎಸ್‌ಪಿ ಮುರಳೀಧರ, ಸರ್ಕಲ್ ಇನ್‌ಸ್ಪೆಕ್ಟರ್ ಶಿವರಾಜ್, ಪಿಎಸ್‌ಐ ಮಮತಾ, ಎಎಸ್‌ಐ ಇಮ್ತಿಯಾಜ್ ಪಾಷಾ, ಹರೀಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net