ದೇವರಕೊಲ್ಲಿಯಲ್ಲಿ ಕಾರು ಪಲ್ಟಿ

car palti
Published on

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮವಾಗಿ ಕೇರಳದ ಕಾಞಂಗಾಡ್ ಮೂಲದ ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಮದೆ ಗ್ರಾಮದ ದೇವರಕೊಲ್ಲಿಯಲ್ಲಿ ಗುರುವಾರ ಳಗ್ಗೆ ಸಂಭವಿಸಿದೆ.

ಸಂಪಾಜೆ ರಸ್ತೆಯಾಗಿ ಮಡಿಕೇರಿಗೆ ತೆರಳುತ್ತಿದ್ದ ಕಾರು ದೇವರಕೊಲ್ಲಿಯಲ್ಲಿಯ ಸರ್ವಿಸ್ ಸ್ಟೇಷನ್ ಬಳಿ ಬೆಳಗ್ಗಿನ ಜಾವ 3 ಗಂಟೆ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಚಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಸಂಪಾಜೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬೆಳಗ್ಗೆ ಗಾಯಾಳುಗಳು ಕಾಞಂಗಾಡ್‌ಗೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net