ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗುಡ್ಡಗಾಡು ಓಟ

Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ದ.ಕ. ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪಿಯು ಕಾಲೇಜು ಬಾಲಕರ- ಬಾಲಕಿಯರ ತಂಡ ಎರಡೂ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ಪಡೆಯಿತು.

ಬಾಲಕರ ವಿಭಾಗ: ರಂಗಣ್ಣ ನಾಯಕರ್- ಪ್ರಥಮ(ಸ್ವಾಮಿ ವಿವೇಕಾನಂದ ಪಪೂ ಕಾಲೇಜು ಎಡಪದವು), ರಘುವೀರ್- ದ್ವಿತೀಯ(ಆಳ್ವಾಸ್), ದರ್ಶನ್- ತೃತೀಯ(ಎಸ್‌ಡಿಎಂ ಪಪೂ ಉಜಿರೆ) ಹನುಮಂತಯ್ಯ- ನಾಲ್ಕನೇ ಸ್ಥಾನ, ಶಿವಾನಂದ-ಐದನೇ ಸ್ಥಾನ(ಆಳ್ವಾಸ್), ಆದಿತ್ಯ- ಆರನೇ ಸ್ಥಾನ(ಎಸ್‌ಡಿಎಂ ಉಜಿರೆ) ಪಡೆದರು.

ಬಾಲಕಿಯರ ವಿಭಾಗ: ಚರಿಷ್ಮಾ- ಪ್ರಥಮ, ಘಾನವಿ- ದ್ವಿತೀಯ(ಆಳ್ವಾಸ್), ದೀಪ್ತಿ- ತೃತೀಯ(ಅರಂತೋಡು ಎಸ್‌ಎಂಪಿ ಕಾಲೇಜು ಸುಳ್ಯ), ಅಂಬಿಕಾ- 4ನೇ ಸ್ಥಾನ, ನವಿತಾ- 5ನೇ ಸ್ಥಾನ(ಆಳ್ವಾಸ್), ಸ್ವಾತಿ- 6ನೇ ಸ್ಥಾನ(ನೂಜಿಬಾಳ್ತಿಲ ಬೆಥನಿ ಪಪೂ ಕಾಲೇಜು) ಪಡೆದರು.

ಸಾಧಕ ಕ್ರೀಡಾಪಟುಗಳನ್ನು ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ದಕ್ಷಿಣ ಕನ್ನಡ ಜಿಲ್ಲೆ, ನೂಜಿಬಾಳ್ತಿಲ ಬೆಥನಿ ಪಪೂ ಕಾಲೇಜು ಸಹಯೋಗದಲ್ಲಿ ಮಂಗಳೂರು ಸ್ಟ್ರಿಂಗ್ ಇನ್‌ಸ್ಟಿಟ್ಯೂಟ್ ಪ್ರಾಯೋಜಕತ್ವದಲ್ಲಿ ನೂಜಿಬಾಳ್ತಿಲದಲ್ಲಿ ಗುಡ್ಡಗಾಟು ಓಟ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net