

ಚಿಂತಾಮಣಿ: ನಗರದ ಎಂಜಿ ರಸ್ತೆಯ ಕೋಲಾರ ವೃತ್ತದ ಸಮೀಪ ಮಾರ್ಗ ಬದಿ ನಿಲ್ಲಿಸಿದ್ದ ಲಾರಿ ಹಿಂಭಾಗಕ್ಕೆ ಭಾನುವಾರ ರಾತ್ರಿ ಕಾರೊಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ದಂಪತಿ ಗಾಯಗೊಂಡಿದ್ದಾರೆ.
ಶಿಡ್ಲಘಟ್ಟ ತಾಲೂಕು ಸೊಣ್ಣೇನಹಳ್ಳಿಯ ರಾಘವೇಂದ್ರ(40), ಸೌಮ್ಯ(35) ಗಾಯಗೊಂಡವರು.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಸ್ನೇಹಿತರ ಜತೆಗೆ ತೆರಳಿದ್ದ ದಂಪತಿ, ಸ್ನೇಹಿತರನ್ನು ತಾಲೂಕಿನ ಕಸಬಾ ಹೋಬಳಿ ಹೆಬ್ಬರಿ ಗ್ರಾಮದಲ್ಲಿ ಡ್ರಾಪ್ ಮಾಡಿ, ಸ್ವ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
17 ಸಿಎಂವೈ 2, 3
ಚಿಂತಾಮಣಿ ನಗರದ ಕೋಲಾರ ಸರ್ಕಲ್‌ನಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು ಜಖಂಗೊಂಡಿದೆ.