ಸಿದ್ದಾಪುರದಲ್ಲಿ ಬೆಂಕಿ ತಗುಲಿ ಕಾರು ಭಸ್ಮ

25sdp1
Published on

ಸಿದ್ದಾಪುರ: ಪಟ್ಟಣದ ಸಾಗರ ವೃತ್ತದಲ್ಲಿ ಬೆಂಕಿ ತಗುಲಿ ಕಾರು ಸಂಪೂರ್ಣ ಭಸ್ಮವಾದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಕಾರಿನಲ್ಲಿ ಮೂರು ಮಕ್ಕಳು ಸಹಿತ ಐವರು ಪ್ರಯಾಣಿಸುತ್ತಿದ್ದರು. ಪಟ್ಟಣದ ಸಾಗರ ವೃತ್ತದ ಬಳಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಒಳಗಿದ್ದವರೆಲ್ಲ ಕೂಡಲೆ ಕಾರಿನಿಂದ ಇಳಿದಿದ್ದಾರೆ. ಒಮ್ಮೆಲೆ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿಯಲು ಪ್ರಾರಂಭಿಸಿತು. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರಾದರೂ ಅಷ್ಟರೊಳಗೆ ಕಾರು ಸಂಪೂರ್ಣ ಸುಟ್ಟು ಹೋಗಿತ್ತು. ಕಾರಿನಲ್ಲಿ ಶಿರಸಿಯ ಅಸ್ಲಂ ಮೋದಿನ್ ಹಾಗೂ ಮೂರು ಮಕ್ಕಳು ಸೇರಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net