ನಿಯಂತ್ರಣ ತಪ್ಪಿ ಅಗ್ನಿಕೊಂಡಕ್ಕೆ ಬಿದ್ದ ಕಾರು

oplus_2097152
oplus_2097152
Published on

ರಾಮನಗರ: ನಗರದ ಮಂಡಿಪೇಟೆ ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಪ್ರಯುಕ್ತ ತೊಡಲಾಗಿದ್ದ ಅಗ್ನಿಕೊಂಡಕ್ಕೆ ಕಾರೊಂದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಳೆದ ಮಂಗಳವಾರ ನಡೆದ ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಪ್ರಯುಕ್ತ ಕಳೆದ ಸೋಮವಾರ ಸಂಜೆ ನಗರದ ಮಂಡಿಪೇಟೆಯಲ್ಲಿರುವ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಅಗ್ನಿಕೊಂಡ ತೊಡಲಾಗಿತ್ತು. ಮಂಗಳವಾರ ರಾತ್ರಿ ಅಗ್ನಿಸ್ಪರ್ಶ ಮಾಡಿ ಬುಧವಾರ ಮಧ್ಯಾಹ್ನ ಅಗ್ನಿಕೊಂಡ ನಡೆದಿತ್ತು. ಕರಗ ಮಹೋತ್ಸವದ ಅಗ್ನಿಕೊಂಡ ಮುಗಿದ ತಕ್ಷಣವೇ ತೆಗೆದ ಕೊಂಡವನ್ನು ಮುಚ್ಚಲಾಗುತ್ತಿತ್ತು. ಆದರೆ, ಈ ಬಾರಿ ಅಗ್ನಿಕೊಂಡ ನಡೆಯುವ ಸ್ಥಳದ ಮೇಲ್ಬಾಗಕ್ಕೆ ಸ್ಲ್ಯಾಬ್ ಹಾಕಿಸುವ ಸಲುವಾಗಿ ಅಗ್ನಿಕೊಂಡ ಮುಚ್ಚದೆ ಹಾಗೆ ಬಿಡಲಾಗಿತ್ತು.

ಭಾನುವಾರ ಸಂಜೆ ಸುಮಾರು 8 ಗಂಟೆ ಸಮಯದಲ್ಲಿ ರಸ್ತೆ ಕಿರಿದಾದ ಕಾರಣ ಕಾರೊಂದು ನಿಯಂತ್ರಣ ತಪ್ಪಿ ಸುಮಾರು 4 ರಿಂದ ಅಡಿ ಆಳವಿದ್ದ ಕೊಂಡದಲ್ಲಿ ಬಿದ್ದಿದೆ.

ತಕ್ಷಣವೇ ಅಕ್ಕಪಕ್ಕದಲ್ಲಿದ್ದ ಜನರು ನೆರವಿಗೆ ಧಾವಿಸಿ ಕಾರಿನಲ್ಲಿದ್ದವರನ್ನು ಮೇಲಕ್ಕೆ ಕರೆದುಕೊಂಡಿದ್ದಾರೆ. ವಿಷಯ ತಿಳಿದ ರಾಮನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕ್ರೇನ್ ಕರೆಸಿ ಅಗ್ನಿಕೊಂಡದಲ್ಲಿದ್ದ ಕಾರನ್ನು ಮೇಲಕ್ಕೆತ್ತಿದ್ದಾರೆ. ಇದೇ ವೇಳೆ ಮುಖ್ಯರಸ್ತೆಯಲ್ಲಿ ಮಂಡೀಪೇಟೆಗೆ ಹೋಗುವ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫೀಕ್ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net