ಗೂಗಲ್‌ಮ್ಯಾಪ್ ನಂಬಿ ಹೊಳೆಗೆ ಬಿದ್ದರು ! ಸೇತುವೆಯಿಂದ ಬಿದ್ದ ಕಾರು: ಪೊಲೀಸ್, ಅಗ್ನಿಶಾಮಕದಳದಿಂದ ಇಬ್ಬರ ರಕ್ಷಣೆ

car in stream
ಅಡೂರು ಪಳ್ಳಂಜಿ ಹೊಳೆಗೆ ಬಿದ್ದ ಕಾರು
Published on

ಕಾಸರಗೋಡು: ಗೂಗಲ್ ಮ್ಯಾಪ್ ನೋಡಿ ಚಲಾಯಿಸುತ್ತಿದ್ದ ಕಾರು ಹೊಳೆ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಕಾರಿನಲ್ಲಿದ್ದ ಇಬ್ಬರನ್ನು ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿ ದಡಸೇರಿಸಿದ್ದಾರೆ. ಅಂಬಲತ್ತರ ಅಂಜಿಲ್ಲತ್ ನಿವಾಸಿ ತಸ್ರೀಫ್ ಹಾಗೂ ಪುಲ್ಲೂರ್ ಮುನ್ನಂಬ ಹೌಸ್‌ನ ರಶೀದ್ ಸಾವಿನ ದವಡೆಯಿಂದ ಪಾರಾದವರು. ಕಾಞಂಗಾಡು ಅಂಬಲತ್ತರದಿಂದ ಉಪ್ಪಿನಂಗಡಿಗೆ ಗೂಗಲ್ ಮ್ಯಾಪ್ ಹಾಕಿಕೊಂಡು ತೆರಳುತ್ತಿದ್ದ ಸಂದರ್ಭ ಅಡೂರು ಸನಿಹದ ಪಳ್ಳಂಜಿ ಬಳಿ ಕಿರುಸೇತುವೆಯಿಂದ ನೀರಿಗೆ ಬಿದ್ದು ಕಾರು ಸಂಪೂರ್ಣ ಮುಳುಗಡೆಯಾಗಿತ್ತು. ಕಾರಿನಿಂದ ಹೊರಬಂದ ಇಬ್ಬರೂ, ಸನಿಹದ ಮರವೊಂದನ್ನು ಹಿಡಿದು ರಕ್ಷಣೆಗಾಗಿ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಆದೂರು ಠಾಣೆ ಪೊಲೀಸರು ಅಗ್ನಿಶಾಮಕದಳದೊಂದಿಗೆ ಆಗಮಿಸಿ ಇಬ್ಬರನ್ನೂ ರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net