ಕ್ಯಾನ್ಸರ್​ ಪೀಡಿತ ಮಗುವನ್ನು ಮನೆಗೆ ತಲುಪಿಸಿ ಬಾಡಿಗೆ ಪಡೆಯದೇ ಮಾನವೀಯತೆ ಮೆರೆದ ಟ್ಯಾಕ್ಸಿ ಚಾಲಕ

Humanity
Published on

ಚಾಮರಾಜನಗರ: ಕ್ಯಾನ್ಸರ್​ ಕಾಯಿಲೆಗೆ ತುತ್ತಾಗಿದ್ದ ಮಗುವನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಟ್ಯಾಕ್ಸಿ ಚಾಲಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಕೊಳ್ಳೇಗಾಲದ ಮುಳ್ಳೂರು ಗ್ರಾಮದ ನಿವಾಸಿ ಮನು ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಯಳಂದೂರು ತಾಲೂಕಿನ ಮದ್ದೂರು ಗ್ರಾಮದ ರವಿಕುಮಾರ್ ಮತ್ತು ಸುಧಾ ದಂಪತಿಗಳ ಪುತ್ರಿ ಸೃಷ್ಟಿ (12) ಮೆದುಳು ಕ್ಯಾನ್ಸರ್​ನಿಂದ ಬಳಲುತ್ತಿದ್ದಾಳೆ.

ಎರಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ‌ ಕೆ.ಆರ್.ಆಸ್ಪತ್ರೆಯಿಂದ ಬೆಂಗಳೂರಿನ ನಿಮ್ಮಾನ್ಸ್​ಗೆ ಕರೆದೊಯ್ಯಲಾಗಿತ್ತು. ನಿಮ್ಮಾನ್ಸ್​ನಲ್ಲಿ ಕಿದ್ವಾಯಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಯಿತು. ಆದರೆ, ವೀಕೆಂಡ್ ಕಾರಣದಿಂದ ಸೋಮವಾರ ಬರಲು ವೈದ್ಯರು ತಿಳಿಸಿದ್ದಾರೆ.

ಆದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಚಾಮರಾಜನಗರಕ್ಕೆ ವಾಪಸ್ ಬರಲು ವಾಹನಗಳು ಸಿಗದೆ ದಂಪತಿ ಪರದಾಡಿದ್ದಾರೆ. ಈ ವೇಳೆ ಅವರ ಕಷ್ಟಕ್ಕೆ ಸ್ಪಂದಿಸಿದ್ದೇ ಟ್ಯಾಕ್ಸಿ ಚಾಲಕ ಮನು. ಬೆಂಗಳೂರಿನಿಂದ ಬಾಲಕಿಯ ಮನಗೆ ಡ್ರಾಪ್​ ಮಾಡಿದ್ದಾರೆ. ಟ್ಯಾಕ್ಸಿ ಬಾಡಿಗೆ ನೀಡಲು ಪರದಾಡುತ್ತಿದ್ದನ್ನು ಕಂಡ ಚಾಲಕ ಬಾಡಿಗೆ ಪಡೆಯಲು ನಿರಾಕರಿಸಿ, ಮಾನವೀಯತೆ ಮೆರೆದಿದ್ದಾನೆ.

ಚಾಲಕ ಮನುವಿನ ಮಾನವೀಯತೆಗೆ ಮನಸೋತ ಮದ್ದೂರು ಗ್ರಾಮಸ್ಥರು ಆತನಿಗೆ ಸನ್ಮಾನ ಮಾಡಿ ಕಳುಹಿಸಿದ್ದಾರೆ. ಚಾಲಕ ಮನುವಿನಂತಹ ಗುಣ ಎಲ್ಲರಿಗೂ ಬರಲಿ ಎಂಬುದೇ ಎಲ್ಲರ ಆಶಯವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net