

ಹೈದರಾಬಾದ್: ಬಹುಭಾಷಾ ನಟಿ ಪ್ರಿಯಾಮಣಿ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರ ಕುರಿತಾದ ಪ್ರಶ್ನೆಗೆ ಬಹಳ ಜಾಣ್ಮೆಯಿಂದ ಉತ್ತರಿಸಿದ ಪ್ರಸಂಗ ಜರುಗಿತು.
ಮದುವೆ ನಂತರ ಸಿನಿಮಾ ಮೇಲಿನ ಜೋಶ್ ಕಳೆದುಕೊಂಡಿರುವ ಪ್ರಿಯಾಮಣಿ ಸಿನಿಮಾದಿಂದ ಕಿರುತೆರೆಗೆ ತಮ್ಮ ಹಾದಿಯನ್ನು ಬದಲಿಸಿದರು. ಹಲವು ದಿನಗಳ ಬಳಿಕ ಇದೀಗ ಮತ್ತೆ ಸಿನಿಮಾ ಇಂಡಸ್ಟ್ರಿಯಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡಿರುವ ಪ್ರಿಯಾಮಣಿ, ಸಿನಿಮಾ, ವೆಬ್ ಸೀರಿಸ್ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಬಿಜಿಯಾಗಿದ್ದಾರೆ.
ಇತ್ತಿಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಸ್ನೇಹಿತನೊಬ್ಬನ ಜತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಿಯಾಮಣಿ ಅವರು ಕಳೆದ ವರ್ಷ ತೆರೆಕಂಡ "ಫ್ಯಾಮಿಲಿ ಮ್ಯಾನ್" ವೆಬ್ ಸೀರಿಸ್ನಲ್ಲಿ ನಟಿಸಿದ್ದಾರೆ. ವೆಬ್ ಸೀರಿಸ್ನಲ್ಲಿ ಸುಚಿತ್ರಾ ಹೆಸರಿನ ನಾಯಕ ಮನೋಜ್ ಬಾಜ್ಪಾಯಿ ಪತ್ನಿಯ ಪಾತ್ರವನ್ನು ಪ್ರಿಯಾಮಣಿ ನಿರ್ವಹಿಸಿದ್ದಾರೆ.
ಈ ನಡುವೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಪ್ರಿಯಾಮಣಿ ತನ್ನ ಕುಟುಂಬವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಸ್ನೇಹಿತರು ಸ್ಥಾಪಿಸಿದ ಸ್ಟಾರ್ಟ್ಅಪ್ ಕಂಪನಿಯಲ್ಲಿ ಪಾಲುದಾರಳಾಗಲು ಉಪನ್ಯಾಸಕ ಕೆಲಸವನ್ನು ಬಿಟ್ಟಿದ್ದರಂತೆ. ಈ ಸಂದರ್ಭದಲ್ಲಿ ಆ ಕಂಪನಿಯ ಪಾಲುದಾರ ಅಥವಾ ಸ್ನೇಹಿತನೊಂದಿಗೆ ಅಫೇರ್ ಇಟ್ಟುಕೊಂಡಿದ್ದರು ಎಂಬ ಮಾತುಗಳು ಕೇಳಿಬಂದಿತ್ತಂತೆ.
ಅನೇಕ ಜನರು ಈ ಬಗ್ಗೆ ಸ್ನೇಹಿತನ ಬಳಿಯು ಕೇಳಿದ್ದರು. ಅವನೊಂದಿಗೆ ಸಂಬಂಧವಿದೆಯೇ ಎಂದು ನನ್ನನ್ನೂ ಕೇಳಿದ್ದಾರೆ. ಆದರೆ, ನೀವು ನಿಜವಾಗಿಯೂ ಅವರೊಂದಿಗೆ ಸಂಬಂಧ ಹೊಂದಿದ್ದೀರಾ? ಈ ಪ್ರಶ್ನೆಗೆ ಉತ್ತರ ಬೇಕಾದರೆ ನೀವು ಫ್ಯಾಮಿಲಿ ಮ್ಯಾನ್ ಎರಡನೇ ಸರಣಿಯವರೆಗೆ ಕಾಯಬೇಕು ಎಂದರು. ಈ ಮೂಲಕ ಎರಡನೇ ಸರಣಿಯ ಪ್ರಮೋಷನ್ಗೆ ಪ್ರಚೋದನೆ ನೀಡುವುದರೊಂದಿಗೆ ಪ್ರಶ್ನೆಗೆ ಸ್ಪಷ್ಟನೆ ನೀಡದೇ ಪ್ರಶ್ನೆಯಾಗಿಯೇ ಕುತೂಹಲ ಕಾಯ್ದಿರಿಸಿದರು.
ಅಂದಹಾಗೆ ಫ್ಯಾಮಿಲಿ ಮ್ಯಾನ್ -2 ವೆಬ್ ಸೀರಿಸ್ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಜೂನ್ 4ರಂದು ಪ್ರೀಮಿಯರ್ ಆಗಲಿದೆ. ಸಮಂತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿ, ವಿಕ್ಟರಿ ವೆಂಕಟೇಶ್ ಅಭಿನಯದ ನಾರಪ್ಪ ಚಿತ್ರದಲ್ಲಿ ಪ್ರಿಯಾಮಣಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)