ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರು ಚಾಲಕ ಸಾವು

ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರು ಚಾಲಕ ಸಾವು
Published on

ಬೈಲುಕುಪ್ಪೆ: ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೈಲುಕುಪ್ಪೆ ನಿವಾಸಿ ದಿ.ಮಣಿ ಎಂಬುವರ ಪುತ್ರ ಅರುಣ್ ಕುಮಾರ್(37) ಮೃತ ದುರ್ದೈವಿ. ಪಿರಿಯಾಪಟ್ಟಣ ಕಡೆಯಿಂದ ಬೈಲುಕುಪ್ಪೆ ಕಡೆಗೆ ಬಿಎಂ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ಮಂಗಳವಾರ ಸಂಜೆ ಪ್ರಕರಣ ನಡೆದಿದೆ.

ಕಾರಿನಲ್ಲಿದ್ದ ಬಸವನಹಳ್ಳಿಯ ರವಿ, ಕೊಪ್ಪ ನಿವಾಸಿ ಅರುಣ್ ಗಾಯಗೊಂಡಿದ್ದಾರೆ. ಸಹೋದರ ಶ್ರೀನಿವಾಸ್ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net