ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ, ಇಬ್ಬರು ಸಾವು

21 AKR 01 Photos
Published on

ಅಕ್ಕಿಆಲೂರ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸಮೀಪದ ಮೂಡೂರ ಕ್ರಾಸ್​ನಲ್ಲಿ ಸೋಮವಾರ ಜರುಗಿದೆ.

ಸೊರಬ ತಾಲೂಕಿನ ತವನಂದಿ ಗ್ರಾಮದ ಮಲ್ಲಿಕಾರ್ಜುನ ಹಾಲಪ್ಪಗೌಡರ ಪಾಟೀಲ (27) ಮತ್ತು ಹಾನಗಲ್ಲ ತಾಲೂಕಿನ ಬೊಮ್ಮನಳ್ಳಿ ನಿವಾಸಿ ಮಲ್ಲಿಕಾರ್ಜುನ ಚಂದ್ರಶೇಖರ ಪಾಟೀಲ (26) ಮೃತರು. ಕಾರ್ ಸರ್ವಿಸ್ ಮಾಡಿಸಲೆಂದು ಸೊರಬ ತಾಲೂಕಿನ ತವನಂದಿಯಿಂದ ಮೂಡೂರ ಗ್ರಾಮದ ಮೂಲಕ ಹುಬ್ಬಳ್ಳಿಯತ್ತ ಹೋಗುತ್ತಿದ್ದಾಗ ಮೂಡೂರ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಕಾರ್ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರ್​ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರ್ ಸಂಪೂರ್ಣ ಜಖಂಗೊಂಡಿದೆ.

ಪಿಎಸ್​ಐ ಶ್ರೀಶೈಲ ಪಟ್ಟಣಶೆಟ್ಟಿ, ಸಿಪಿಐ ಶಿವಶಂಕರ ಗಣಾಚಾರ್ಯ ಭೇಟಿ ನೀಡಿ ಪರಿಶೀಲಿಸಿದರು. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net