ಕಾರು, ಬೈಕ್‌ ಡಿಕ್ಕಿ-ಇಬ್ಬರಿಗೆ ಗಾಯ

car-bike-accident
Published on

ಹೊನ್ನಾವರ: ತಾಲೂಕಿನ ಕವಲಕ್ಕಿ ಸಮೀಪ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಬೈಕ್ ಮತ್ತು ಕಾರು ಡಿಕ್ಕಿಯಾಗಿ ಬೈಕ್ ಸವಾರ ಮತ್ತು ಸಹಸವಾರ ಗಂಭೀರ ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.

ಹೊನ್ನಾವರದಿಂದ ಗೇರುಸೊಪ್ಪಾ ಕಡೆಗೆ ಸಂಚರಿಸುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ‌. ಕಾರಿನ ಬಲಬದಿಗೆ ಹಾನಿಯಾಗಿದೆ. 

ಬೈಕ್ ಸವಾರ ಕುಮಟಾ ತಾಲೂಕಿನ ಕತಗಾಲ ಉಪ್ಪಿನಪಟ್ಟಣದ ದಯಾ ಶಂಕರ್ ಅಂಬಿಗ ಮತ್ತು ಹಿಂಬದಿಯಲ್ಲಿ ಕುಳಿತ್ತಿದ್ದ ಹೊನ್ನಾವರ ತಾಲೂಕಿನ ಕರಿಕುರ್ವಾದ ತ್ರಿವೇಣಿ ಗಣಪತಿ ಅಂಬಿಗ ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡ ಇವರನ್ನು ಹೆಚ್ಚಿನ ಚಿಕಿತ್ಸೆಗೆ ನೆರೆಯ ಜಿಲ್ಲೆ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net