

ಕಾಸರಗೋಡು: ಪುತ್ತಿಗೆ ಸನಿಹದ ಬಾಡೂರುಪದವಿನಲ್ಲಿ ಕಾರು ಮತ್ತು ಬೈಕ್ ಡಿಕ್ಕಿಯಾಗಿ ಬಾಡೂರು ಪಾಡಿ ನಿವಾಸಿ ವಿ.ಪಿ.ಸಂದೇಶ್ ಕುಮಾರ್ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂದೇಶ್‌ಕುಮಾರ್ ಚಲಾಯಿಸುತ್ತಿದ್ದ ಬೈಕ್ ಮತ್ತು ಎದುರಿನಿಂದ ಆಗಮಿಸುತ್ತಿದ್ದ ಕಾರು ಪರಸ್ಪರ ಡಿಕ್ಕಿಯಾಗಿದೆ. ಅಪಘಾತದಿಂದ ಸಂದೇಶ್ ಅವರ ಕಾಲು, ಕೈಗಳಿಗೆ ಗಾಯಗಳುಂಟಾಗಿದೆ.