ಭೀಕರ ಅಪಘಾತಕ್ಕೆ ಬೆಚ್ಚಿಬಿದ್ದ ಜನ: ಕಾರಿನಲ್ಲಿದ್ದ ಮೂವರು ಸಾವು

accident
Published on

ಚಿತ್ರದುರ್ಗ: ತಾಲೂಕಿನ ಕ್ಯಾದಿಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ -48ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮೂವರು ದುರ್ಮರಣಕ್ಕೀಡಾಗಿದ್ದಾರೆ.

ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮೂರು ಮೃತಪಟ್ಟಿದ್ದಾರೆ. ರಕ್ತಸಿಕ್ತವಾದ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಬೆಚ್ಚಿಬೀಳಿಸುವಂತಿತ್ತು. ಇದನ್ನೂ ಓದಿರಿ ಕಿಡ್ನಿ ಮಾರಿ ಹಣ ಕೊಡಲು ಯತ್ನಿಸಿದೆ… ಆಗಲಿಲ್ಲ ಎನ್ನುತ್ತಲೇ ರೈಲಿಗೆ ತಲೆಕೊಟ್ಟ: ಡೆತ್​ನೋಟ್​ನಲ್ಲಿದೆ ಬೆಚ್ಚಿಬೀಳಿಸೋ ರಹಸ್ಯ

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಕೆಂಗೇರಿ ಮೂಲದ ರೇಣುಕಮ್ಮ(55) ಸ್ಥಳದಲ್ಲೇ ಮೃತಪಟ್ಟರು. ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಶಿವು(43) ಮತ್ತು ಶಂಕರ್ (42) ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಲಿಲ್ಲ. ಗಂಭೀರ ಗಾಯಗೊಂಡ ಮತ್ತಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net