ಕಾರು, ಬೈಕ್​ ಕಳ್ಳನ ಬಂಧನ

crime
Published on

 ಟಾಟಾ ಎಸಿ, ಮಾರುತಿ&800, ಬೈಕ್​, ಆಟೋ ವಶ

ಬಿಡದಿ: ಕಾರು, ಆಟೋ, ಬೈಕ್​ ಕಳ್ಳನ ಮಾಡಿ ಪರಾರಿಯಾಗಿದ್ದವನನ್ನು ಬಿಡದಿ ಪೊಲೀಸರು ಬಂಧಿಸಿ, ವಿವಿಧ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಮೂಲದ ಸೂಪಿಯನ್​ ಬಂಧಿತ. ಆ.30ರಂದು ಬೀಮೇನಹಳ್ಳಿಯ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಟಾಟಾ ಎಸಿ ವಾಹನವನ್ನು ಕಳುವಾಗಿತ್ತು. ವಾಹನ ಮಾಲೀಕ ರಾಮಮೂರ್ತಿ ಅವರು ಬಿಡದಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ತನಿಖೆ ನಡೆಸಿದ ಪೊಲೀಸರು ಸೂಪಿಯನ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ, ಬೇರೆಬೇರೆ ಕಡೆಗಳಲ್ಲಿ ವಾಹನಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. 1 ಟಾಟಾ ಎಸಿ, 1 ಮಾರುತಿ&800, 1 ದ್ವಿಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net