ರಸ್ತೆ ಅಗಲೀಕರಣದ ಎಡವಟ್ಟು, ಕಾರು ಮರಕ್ಕೆ ಡಿಕ್ಕಿ; ಇಬ್ಬರ ಸಾವು, ಮೂವರ ಪರಿಸ್ಥಿತಿ ಗಂಭೀರ

Car Accident
Published on

ಆನೇಕಲ್: ರಸ್ತೆ ಅಗಲೀಕರಣದ ವೇಳೆಯಲ್ಲಿನ ಒಂದು ಎಡವಟ್ಟಿನಿಂದಾಗಿ ಕಾರು ಅಪಘಾತಕ್ಕೀಡಾಗಿ, ಇಬ್ಬರು ಸಾವಿಗೀಡಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಮೂವರ ಪರಿಸ್ಥಿತಿ ಗಂಭೀರವಾಗಿದೆ.

ಆನೇಕಲ್​-ಥಳಿ ಮುಖ್ಯರಸ್ತೆಯ ಸೋಲೂರು ಬಳಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಹೊಂಗಸಂದ್ರದ ಶಶಿಧರ್ (31), ಕುಣಿಗಲ್ ಮೂಲದ ಭೈರೇಶ್ (34) ಸಾವಿಗೀಡಾಗಿದ್ದರೆ, ಗಾಯಾಳುಗಳಾದ ರಾಹುಲ್, ಮಿಥುನ್, ತಿಪ್ಪೇಶ್ ಸ್ಥಿತಿ ಚಿಂತಾಜನಕವಾಗಿದೆ.

ಈ ಐವರು ಸ್ವಿಫ್ಟ್​ ಕಾರಿನಲ್ಲಿ ಮದಗೊಂಡನಹಳ್ಳಿಗೆ ಹೋಗಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ. ಇಲ್ಲಿ ರಸ್ತೆ ಅಗಲೀಕರಣಕ್ಕೆಂದು ಕಡಿದ ಮರವನ್ನು ತೆರವುಗೊಳಿಸಿರಲಿಲ್ಲ. ರಸ್ತೆಗೆ ಅಡ್ಡಲಾಗಿ ಇರಿಸಿದ್ದ ಮರ ಗಮನಕ್ಕೆ ಬರದೆ ಕಾರು ಅಪಘಾತಕ್ಕೆ ಈಡಾಗಿದೆ.

ಅಪಘಾತದಿಂದ ಕಾರಿನಲ್ಲಿದ್ದ ಐವರೂ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವಿಗೀಡಾಗಿದ್ದರೆ. ಉಳಿದ ಮೂವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಆನೇಕಲ್ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net