ಚಿಕ್ಕಮಗಳೂರಲ್ಲಿ ಕಾರು ಅಪಘಾತ ಪ್ರಕರಣ; 'ಪೊಲೀಸರು ಹೇಳಿದಂತೆ ಕೇಳುವೆ…' ಎಂದ ಚಂದ್ರಪ್ರಭ

chandraprabha
Published on

ಹಾಸನ: ಚಿಕ್ಕಮಗಳೂರಲ್ಲಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಮಿಡಿ ಕಿಲಾಡಿ ಖ್ಯಾತಿ ನಟ ಚಂದ್ರಪ್ರಭ ಪ್ರತಿಕ್ರಿಯೆ ನೀಡಿದ್ದಾರೆ.

"ನಾನು ತುಂಬಾ ಒತ್ತಡದಲ್ಲಿದ್ದೇನೆ. ಅಪಘಾತದ ನಂತರ ನಾನು ಕಾರು ನಿಲ್ಲಿಸಿ, ಪೊಲೀಸ್ ಜತೆ ಮಾತನಾಡಿ ತೆರಳಿದೆ. ಪೊಲೀಸರೇ ನನ್ನನ್ನು ಕಳುಹಿಸಿಕೊಟ್ಟರು, ಅಗತ್ಯವಿದ್ದರೆ ಪುನಃ ಬರಲು ತಿಳಿಸಿದರು. ಈಗ ಹೊರಗಡೆ ಕೆಲಸದಲ್ಲಿದ್ದೇನೆ. ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗುವೆ. ನನ್ನ ವಾಹನದ ಮೂಲ ದಾಖಲೆಗಳು ಬೆಂಗಳೂರಲ್ಲಿದೆ. ಅದನ್ನು ತರಿಸಿಕೊಂಡು ನಾನು ಪೊಲೀಸ್ ಠಾಣೆಗೆ ಹಾಜರಾಗುವೆ'' ಎಂದು ತಿಳಿಸಿದ್ದಾರೆ.

''ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಾಲ್ತೇಶ್ ಮನೆಯವರು ನನ್ನನ್ನು ಸಂಪರ್ಕಿಸಿಲ್ಲ, ನನ್ನ ಸ್ನೇಹಿತನನ್ನ ಅವರು ಸಂಪರ್ಕಿಸಿದ್ದಾರೆ. ಮೊದಲು ನಾನು ಆಸ್ಪತ್ರೆಗೆ ಹೋಗಲ್ಲ, ನೇರವಾಗಿ ಠಾಣೆಗೆ ಭೇಟಿ ನೀಡಿ, ಪೊಲೀಸ್ ಏನು ಹೇಳುತ್ತಾರೋ ಅದನ್ನ ನಾನು ಕೇಳುವೆ'' ಎಂದು ಚಂದ್ರಪ್ರಭ ತಿಳಿಸಿದ್ದಾರೆ.

ಸದ್ಯ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮಾಲ್ತೇಶ್​ಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು ನಗರದ ಕೆಎಸ್ಆರ್​​​​ಟಿಸಿ ಬಸ್ ನಿಲ್ದಾಣದ ಮುಂಭಾಗ ಬೈಕು ಚಂದ್ರಪ್ರಭ ಕಾರಿಗೆ ಡಿಕ್ಕಿ ಹೊಡೆದ ಘಟನೆ ಬುಧವಾರ ಬೆಳಗಿನ ಜಾವ ನಡೆದಿತ್ತು. ಗಾಯಗೊಂಡ ವ್ಯಕ್ತಿಯನ್ನು ಮಾಲ್ತೇಶ್ ಎನ್ನಲಾಗಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿತ್ತು. KA 51 MD 9552 ರಿಜಿಸ್ಟರ್ ಹೊಂದಿದ ಕಾರಿಗೆ ಮಾಲ್ತೇಶ್ ಅವರ ಸ್ಕೂಟರ್​​​ ಗುದ್ದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಾಲತೇಶ್ ಸ್ಥಳದಲ್ಲಿ ಬಿದ್ದಿದ್ದು, ಗಾಯಗೊಂಡಿದ್ದಾರೆ. ಇನ್ನು ಕಾರು ಕಾಮಿಡಿ ಕಿಲಾಡಿ ಶೋ ಚಂದ್ರಪ್ರಭ ಅವರಿಗೆ ಸೇರಿದ್ದು ಎನ್ನಲಾಗಿದ್ದು, ಈ ಸಂಬಂಧ ಚಂದ್ರಪ್ರಭ ಅವರು ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net