

ಕಾಸರಗೋಡು: ಕೇರಳ ಪ್ರತಿಪಕ್ಷ ಮುಖಂಡ ವಿ.ಡಿ. ಸತೀಶನ್ ಸಂಚರಿಸುತ್ತಿದ್ದ ಕಾರು ಬೆಂಗಾವಲು ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನ ಎದುರಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಪ್ರತಿಪಕ್ಷ ಮುಖಂಡ ವಿ.ಡಿ.ಸತೀಶನ್ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಕಾಞಂಗಾಡು ಸನಿಹ ರಾಜ್ಯ ಹೆದ್ದಾರಿ ಪಳ್ಳಿಕೆರೆಯಲ್ಲಿ ಶನಿವಾರ ಸಂಜೆ ಅಪಘಾತ ನಡೆದಿದೆ. ವಿ.ಡಿ.ಸತೀಶನ್ ಅವರಿದ್ದ ಕಾರು, ಮುಂಭಾಗದಲ್ಲಿ ಎಸ್ಕಾರ್ಟ್ ತೆರಳುತ್ತಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಕಾರಿನ ಬೋನೆಟ್ ಭಾಗ ಜಖಂಗೊಂಡಿದೆ. ವಿ.ಡಿ ಸತೀಶನ್ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೊಲ್ಲೂರು ಕ್ಷೇತ್ರ ಸಂದರ್ಶನಕ್ಕೆ ತೆರಳುವ ಮಧ್ಯೆ ಅಪಘಾತ ಸಂಭವಿಸಿದ್ದು, ನಂತರ ಬೇರೊಂದು ವಾಹನದಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.