

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಬಳಿ ಹುಬ್ಬಳ್ಳಿ ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಕುರಿಗಳ ಮೇಲೆ ಕಾರು ಹರಿದಿರುವ ಪರಿಣಾಮ 14 ಕುರಿಗಳು ಸಾವನ್ನಪ್ಪಿವೆ. ಆರು ಕುರಿಗಳಿಗೆ ಗಂಭೀರ ಗಾಯವಾಗಿದೆ.
ತಾಲೂಕಿಮ ಕೊರ್ತಿ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಕರಿಯಪ್ಪ ದಂದರಗಿ ಹೆಸರಿನ ಕುರಿಗಾಹಿಗೆ ಸೇರಿದ ಕುರಿಗಳು ರಸ್ತೆಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಕಾರು ಅವುಗಳ ಮೇಲೆ ಹತ್ತಿದೆ. ಸ್ಥಳಕ್ಕೆ ಬೀಳಗಿ ಪೊಲೀಸರು ಬಂದಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.