ಬಿಡದಿ: ಚಿಕ್ಕ ಕುಂಟನಹಳ್ಳಿ ಕ್ರಾಸ್ ಬಳಿ ಶುಕ್ರವಾರ ಜಿಂಕೆ ಮತ್ತು ಕಾಡು ಹಂದಿಯನ್ನು ಬೇಟೆಯಾಡಿ ಮಾಂಸ ಸಾಗಣೆ ಮಾಡುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಂಚಾರಿ ಜಾಗೃತದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ನಾಗಸಂದ್ರ ಸಮೀಪದ ತೋಟದ ಗುಡ್ಡನಹಳ್ಳಿ ನಿವಾಸಿ ಶ್ರೀನಿವಾಸ್ (47), ನೆಲಮಂಗಲ ತಾಲೂಕು ಪಾದನಕುಂಟೆ ಗ್ರಾಮದ ಹನುಮಂತರಾಜು(44), ರಾಮನಗರ ತಾಲೂಕಿನ ನಂಜೇಗೌಡನದೊಡ್ಡಿ ಗ್ರಾಮದ ಮುನಿರಾಜು(38) ಬಂಧಿತರು.
ಮೂರು ಮಂದಿ ಬಂದೂಕಿನಿಂದ ಎರಡು ಜಿಂಕೆ ಮತ್ತು ಎರಡು ಕಾಡುಹಂದಿಯನ್ನು ಕೊಂದು ಸಾಗಣೆ ಮಾಡುತ್ತಿದ್ದಾಗ ಬೆಂಗಳೂರು ಅರಣ್ಯ ಸಂಚಾರಿ ದಳದ ಆರ್‌ಎ್ಒ ರಮೇಶ್ ಹಾಗೂ ಸಿಬ್ಬಂದಿ ದಾಳಿಮಾಡಿ ವಶಕ್ಕೆ ಪಡೆದಿದ್ದಾರೆ. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಸಂಚಾರಿ ಜಾಗೃತದಳದ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.