ವಿಜೃಂಭಣೆಯ ಬಾಣಂತಿದೇವಿ ಜಾತ್ರಾ ಮಹೋತ್ಸವ

15mnd2(A)
Published on

ಮುಂಡಗೋಡ: ಪ್ರತಿ ವರ್ಷದಂತೆ ಮಕರ ಸಂಕ್ರಮಣ ದಿನದಂದು ಜರುಗುವ ತಾಲೂಕಿನ ಸಾಲಗಾಂವ ಗ್ರಾಮದ ಬಾಣಂತಿದೇವಿಯ ಜಾತ್ರಾ ಮಹೋತ್ಸವವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಪಟ್ಟಣದ ಹುಬ್ಬಳ್ಳಿ-ಶಿರಸಿ ರಸ್ತೆಯ ಸಾಲಗಾಂವ ಗ್ರಾಮದ ಕೆರೆಯ ದಂಡೆಯ ಮೇಲೆ ವಿರಾಜಮಾನಳಾಗಿರುವ ಬಾಣಂತಿದೇವಿಯ ಮಹೋತ್ಸವವು ತಾಲೂಕಿನಲ್ಲಿ ನಡೆಯುವ ಮೊದಲ ಜಾತ್ರೆಯಾಗಿದೆ.

ಜಾತ್ರೆಯಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ಹಾಗೂ ತಾಲೂಕುಗಳಿಂದ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು. ವರ್ಷದಿಂದ ವರ್ಷಕ್ಕೆ ಜನಸಾಗರವೇ ಇಲ್ಲಿ ಹರಿದು ಬರುತ್ತಿದೆ. ವಿಶೇಷವಾಗಿ ಮಕ್ಕಳಿಲ್ಲವೆಂದು ಈ ಬಾಣಂತಿದೇವಿಗೆ ಹರಕೆ ಹೊತ್ತಿರುತ್ತಾರೆ. ಹರಕೆ ನೆರವೇರಿದ ಮೇಲೆ ಕೆಲವರು ಮಕ್ಕಳನ್ನು ಕೆರೆಯಲ್ಲಿ ಸ್ನಾನ ಮಾಡಿಸಿದರೆ ಇನ್ನು ಕೆಲವರು ತೆಪ್ಪದಲ್ಲಿ ತೇಲಿಸಿದರು. ಮೆರವಣಿಗೆ ನಂತರ ತೆಪ್ಪವನ್ನು ಬಿಡುವಾಗ ನೆರೆದ ಜನ ಸಮೂಹ ತೆಪ್ಪಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net