ಮುಖ್ಯ ನಾಲೆ ಏರಿ ಒಡೆದು ನೀರು ಪೋಲು

IMG-20240726-WA0121
Published on

ಆಲೂರು: ತಾಲೂಕಿನಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು ಪಾಳ್ಯ ಹೋಬಳಿಯ ಹುಲ್ಲಹಳ್ಳಿ ಗ್ರಾಮದ ಸಮೀಪ ಹಾದು ಹೋಗಿರುವ ವಾಟೆಹೊಳೆ ಜಲಾಶಯದ ನಾಲೆ ಒಡೆದು ಕೆರೆಯ ನೀರು ಜಮೀನುಗಳಿಗೆ ಹರಿಯುತ್ತಿದೆ.


ಹುಲ್ಲುಹಳ್ಳಿ ಗ್ರಾಮಸ್ಥರಲ್ಲಿ ಸದ್ಯ ಆತಂಕ ಮನೆ ಮಾಡಿದೆ. ಭಾರಿ ಮಳೆಯಿಂದಾಗಿ ವಾಟೆಹೊಳೆ ಜಲಾಶಯದ ಮುಖ್ಯ ನಾಲೆ ಏರಿ ಒಡೆದು ನೀರು ಪೋಲಾಗುತ್ತಿದೆ. ಒಂದು ತಿಂಗಳಿನಿಂದ ಸುರಿದ ಮಳೆಗೆ ಜಲಾಶಯ ಸೇರಿದಂತೆ ಕೆರೆ-ಕಟ್ಟೆಗಳು ಭರ್ತಿಯಾಗಿರುವ ಪರಿಣಾಮ ಹುಲ್ಲಹಳ್ಳಿ ಗ್ರಾಮದ ಬಳಿ ಹಾದು ಹೋಗಿರುವ ವಾಟೆಹೊಳೆ ಜಲಾಶಯದ ನಾಲೆಗೆ ನೀರಿನ ಹರಿವು ಹೆಚ್ಚಾಗಿದೆ. ಭಾರಿ ಪ್ರಮಾಣದ ನೀರಿನ ಒತ್ತಡ ತಡೆಯಲಾಗದೆ ಈ ಅವಘಡ ಸಂಭವಿಸಿದೆ. ಇದರಿಂದಾಗಿ ನಾಲೆಯ ಹಿಂಭಾಗದ ತೋಟಗಳು, ಜಮೀನುಗಳು ಜಲಾವೃತವಾಗಿವೆ.


ತಾಲೂಕಿನಾದ್ಯಂತ ಹಲವು ಕುಟುಂಬಗಳು ಮನೆ ಕಳೆದುಕೊಂಡು ಸಂಕಷ್ಟದಲ್ಲಿವೆ. ಅಡಕೆ, ಶುಂಠಿ, ಜೋಳ ಬೆಳೆಗಳಿಗೆ ಹಾನಿಯಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಹುಲ್ಲಹಳ್ಳಿ ನಾಗರಾಜ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net