ಪಹಲ್ಗಾಮ್ ಮೃತರಿಗೆ ಮೊಂಬತ್ತಿ ದೀಪ ಹಿಡಿದು ಸಂತಾಪ

25sunti01
Published on

ಸುಂಟಿಕೊಪ್ಪ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿ ಖಂಡಿಸಿ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಸಂಜೀವಿನಿ ಒಕ್ಕೂಟ ಹಾಗೂ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಮೊಂಬತ್ತಿ ದೀಪ ಹಿಡಿದು ಸಂತಾಪ ಸೂಚಿಸಲಾಯಿತು.

ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲತಾ ಬಸವರಾಜ್ ನೇತೃತ್ವದಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್ ಗ್ರಾಮದಲ್ಲಿ ತೀವ್ರವಾದಿಗಳು ನಡೆಸಿದ ಅತಿಕ್ರೂರ ಆಕ್ರಮಣವನ್ನು ಹಾಗೂ ಅಮಾಯಕರ ಜೀವ ಕಸಿದಿದ್ದನ್ನು ಖಂಡಿಸಲಾಯಿತು. ಈ ವೇಳೆ ಮೃತರ ಭಾವಚಿತ್ರಗಳನ್ನು ಇರಿಸಿ ಪುಷ್ಪಾರ್ಚನೆ ಸಲ್ಲಿಸಿ ಮೊಂಬತ್ತಿ ಬೆಳಗಿಸುವ ಮೂಲಕ ಆತ್ಮಕ್ಕೆ ಶಾಂತಿ ಕೋರಿದರು. ಒಂದು ನಿಮಿಷದ ಮೌನ ಆಚರಣೆ ಮೂಲಕ ಶ್ರದ್ಧಾಂಜಲಿ ಆರ್ಪಿಸಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿದರು.

ಕಾಲೇಜು ಪ್ರಾಂಶುಪಾಲರಾದ ಪಿ.ಸೋಮಚಂದ್ರ, ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್, ಸದಸ್ಯರಾದ ರಮೇಶ್, ಸಿದ್ಧೀಕ್, ಒಕ್ಕೂಟದ ಸದಸ್ಯರಾದ ರಶ್ಮಿ, ಉಷಾ ಶ್ರೀಧರ್, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net