ಸೌಕರ್ಯಗಳಿಲ್ಲದ ಶಾಲೆಗಳ ಪರವಾನಗಿ ರದ್ದುಪಡಿಸಿ

ದೇವದುರ್ಗದಲ್ಲಿ ಡಿಡಿಪಿಐ ಕೆ.ಡಿ.ಬಡಿಗೇರ್‌ಗೆ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಪ್ರಮುಖರಾದ ತಿಮ್ಮನಗೌಡ ಗೌರಂಪೇಟೆ, ಮಲ್ಲೇಶ ನಾಯಕ, ರಮೇಶ ನಾಯಕ ಇತರರಿದ್ದರು.
ದೇವದುರ್ಗದಲ್ಲಿ ಡಿಡಿಪಿಐ ಕೆ.ಡಿ.ಬಡಿಗೇರ್‌ಗೆ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಪ್ರಮುಖರಾದ ತಿಮ್ಮನಗೌಡ ಗೌರಂಪೇಟೆ, ಮಲ್ಲೇಶ ನಾಯಕ, ರಮೇಶ ನಾಯಕ ಇತರರಿದ್ದರು.
Published on

ದೇವದುರ್ಗ ಲೂಕು ಸೇರಿ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪಟ್ಟಣದ ಬಿಇಒ ಕಚೇರಿಯಲ್ಲಿ ಡಿಡಿಪಿಐ ಕೆ.ಡಿ.ಬಡಿಗೇರ್‌ಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ನಗರ ಸೇರಿ ತಾಲೂಕಿನಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಾಗಿದ್ದು, ಶಿಕ್ಷಣದ ಹೆಸರಿನಲ್ಲಿ ಮಕ್ಕಳಿಗೆ ಮಾನಸಿಕ ಹಿಂಸೆ ಹಾಗೂ ಪಾಲಕರಿಗೆ ಕಿರಿಕಿರಿ ನೀಡಿ ದಾಖಲಾತಿ ಪಡೆಯುತ್ತಿವೆ. ನಂತರ ವಿವಿಧ ಕಾರಣ ಹೇಳಿ ಮನಬಂದಂತೆ ಡೊನೇಷನ್ ವಸೂಲಿ ಮಾಡುತ್ತಿವೆ. ಆದರೆ, ಶಾಲೆಯಲ್ಲಿ ಅಗತ್ಯ ಸೌಲಭ್ಯ ಇರುವುದಿಲ್ಲ. ಕುಡಿವ ನೀರು, ಕಟ್ಟಡ, ಶಾಲಾ ಮೈದಾನ, ಕಾಂಪೌಂಡ್, ವಾಹನ ಸೌಲಭ್ಯ ಸೇರಿ ಶಿಕ್ಷಣ ಇಲಾಖೆ ನಿಯಮ ಪ್ರಕಾರ ತಜ್ಞ ಶಿಕ್ಷಕರು, ಪ್ರಾಧ್ಯಾಪಕರು ಇರುವುದಿಲ್ಲ. ಆದರೆ, ಶಾಲಾ ಶುಲ್ಕ ಮಾತ್ರ ಹೆಚ್ಚಿಗೆ ವಸೂಲಿ ಮಾಡುತ್ತಿವೆ ಎಂದು ಆರೋಪಿಸಿದರು. ಕೂಡಲೇ ಎಲ್ಲ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಡೊನೇಷನ್ ಹಾವಳಿ ತಡೆಯಬೇಕು. ಮಕ್ಕಳ ಕಲಿಕೆಗೆ ಬೇಕಾದ ಅಗತ್ಯ ಸೌಲಭ್ಯ ಒದಗಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಮೂಲ ಸೌಕರ್ಯ ಹೊಂದಿರದ ಸಂಸ್ಥೆಗಳ ಪರವಾನಗಿ ರದ್ದುಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಪ್ರಮುಖರಾದ ತಿಮ್ಮನಗೌಡ ಗೌರಂಪೇಟೆ, ಮಲ್ಲೇಶ ನಾಯಕ, ರಮೇಶ ನಾಯಕ, ಸೂಗೂರೆಡ್ಡಿಗೌಡ, ಹನುಮಂತ್ರಾಯ, ನಾಗರಾಜ, ವೆಂಕಟೇಶ ತಳವಾರದೊಡ್ಡಿ, ನಾಗರಾಜ ತಳವಾರದೊಡ್ಡಿ, ಹರ್ಷ, ರೆಡ್ಡಿ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net