

ಬೇಲೂರು: ಸೋಮವಾರ ನಿಗದಿಯಾಗಿದ್ದ ಪುರಸಭೆಯ 64 ಮಳಿಗೆಗಳ ಇ-ಪ್ರಕ್ಯೋರ್ ಮೆಂಟ್ ಹರಾಜು ಕೊನೆ ಕ್ಷಣದಲ್ಲಿ ರದ್ದಾಯಿತು.
ಮಳಿಗೆಗಳ ಹರಾಜಿನಲ್ಲಿ ಭಾಗವಹಿಸಲು ಇಎಂಡಿ ಮೊತ್ತ ಕಟ್ಟಲು ಅ.10ರವರೆಗೆ ಕಾಲಾವಕಾಶ ನೀಡಿ, ಅ.14 ಕ್ಕೆ ಹರಾಜು ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿತ್ತು.
ಪಾರದರ್ಶಕ ಟೆಂಡರ್ ನಡೆಸುವ ಉದ್ದೇಶದಿಂದ ಹರಾಜು ಪ್ರಕ್ರಿಯೆ ಮುಂದೂಡಲಾಗಿದೆ ಎಂದು ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ತಿಳಿಸಿದರು. ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ, ಮುಂದಿನ ದಿನಗಳಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.