

ಬೆಂಗಳೂರು : 69ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೆನರಾ ಬ್ಯಾಂಕ್ ಕನ್ನಡ ಸಂಘವು ಅಂತರ ಬ್ಯಾಂಕ್ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿದೆ. ಕನ್ನಡ ಭಾವಗೀತೆ, ಚಿತ್ರಗೀತೆ, ಅಂತ್ಯಾಕ್ಷರಿ ಮತ್ತು ರಸಪ್ರಶ್ನೆ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ದೆಗಳಿರುತ್ತವೆ.
ಜೆ.ಸಿ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ನ.23ರಂದು ಬೆಳಗ್ಗೆ 9.30 ರಿಂದ ಅಂತರಬ್ಯಾಂಕ್ ಉದ್ಯೋಗಿಗಳಿಗೆ ಹಾಗೂ ನ.24ರಂದು ಕೆನರಾ ಬ್ಯಾಂಕ್ ಉದ್ಯೋಗಿಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿವೆ. ಅಂತರ ಬ್ಯಾಂಕ್ ಸ್ಪರ್ದೆಯಲ್ಲಿ ಎಲ್ಲ ಬ್ಯಾಂಕ್‌ಗಳ ನೌಕರರು ಭಾಗವಹಿಸಬಹುದು ಎಂದು ಸಂಘದ ಕಾರ್ಯದರ್ಶಿ ಜೆ.ಸೋಮಶೇಖರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ. 97420 83386 ಸಂಪರ್ಕಿಸಬಹುದು.