ಪ್ರಚಾರ ರಥಕ್ಕೆ ಚಾಲನೆ

ಪ್ರಚಾರ ರಥಕ್ಕೆ ಚಾಲನೆ
Published on

ಸರಗೂರು: ತಾಲೂಕಿನ ಹಂಚೀಪುರ ಗ್ರಾಮದ ಗುರುಮಲ್ಲೇಶ್ವರ ಪಟ್ಟದ ಮಠದ ಆವರಣದಲ್ಲಿ ಇತ್ತೀಚೆಗೆ ಕಾಯಕಯೋಗಿ ಬಸವಣ್ಣ ಜಯಂತ್ಯುತ್ಸವ ಕಾರ್ಯಕ್ರಮದ ಪ್ರಚಾರ ರಥಕ್ಕೆ ಮಠದ ಶ್ರೀಚನ್ನಬಸವ ಸ್ವಾಮೀಜಿ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ವೀರಶೈವ ಸಮಾಜದ ಏಳಿಗೆಗಾಗಿ ಬಸವಣ್ಣ ಶಕ್ತಿಮೀರಿ ದುಡಿದಿದ್ದಾರೆ. ಸಮಸಮಾಜದ ಕನಸು ಕಂಡವರು. ಮೂಢನಂಬಿಕೆಗಳನ್ನು ತೊಲಗಿಸಲು ಹೋರಾಟ ನಡೆಸಿದರು. ಕಾಯಕದಿಂದಲೇ ಕೈಲಾಸ ಕಂಡವರು. ಸಮಾಜದಲ್ಲಿ ಲಿಂಗ ಅಸಮಾನತೆ, ಜಾತಿ, ಧರ್ಮದ ವಿರುದ್ಧ ಹೋರಾಡಿದ ಬಸವಣ್ಣ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಬಸವಣ್ಣ ಅವರು ಮಾದಾರ ಚನ್ನಯ್ಯ ಆರಂಭಿಸಿದ ಭಕ್ತಿ ಆಂದೋಲನವನ್ನು ಮುಂದುವರಿಸಿದರು. ವಚನಗಳ ಮೂಲಕ ಸಮಾಜಕ್ಕೆ ಸಂದೇಶವನ್ನು ಸಾರಿದರು. ಆದರೆ, ಇತ್ತೀಚೆಗೆ ಬಸವಣ್ಣ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿರುವುದು ನೋವಿನ ಸಂಗತಿಯಾಗಿದೆ. ಹೀಗಾಗಿ ಬಸವಣ್ಣನವರ ಆಚಾರ-ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದೆ ಎಂದರು.

ಬಸವ ಬಳಗದ ಅಧ್ಯಕ್ಷ ಹಂಚೀಪುರ ಗಣಪತಿ ಮಾತನಾಡಿ, ಜೂ.23ರಂದು ಸರಗೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಾಟವಾಳು ನಟರಾಜು, ಪ್ರಧಾನ ಕಾರ್ಯದರ್ಶಿ ಗುರುಸ್ವಾಮಿ ಮನುಗನಹಳ್ಳಿ, ಬಸವ ಬಳಗ ಅಧ್ಯಕ್ಷ ಹಂಚೀಪುರ ಗಣಪತಿ, ನಿಕಟಪೂರ್ವ ಅಧ್ಯಕ್ಷ ಶಿವರಾಜಪ್ಪ, ಕೆ.ಎಸ್.ರಾಜಪ್ಪ, ಪರಶಿವಮೂರ್ತಿ, ಬಸವಣ್ಣ, ಲಂಕೆ ನಂದೀಶ್ ಜಯಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಯೋಗೇಶ್, ಮಂಗಳಾ, ಮಹೇಶ್, ಗ್ರಾಪಂ ಸದಸ್ಯ ಪ್ರಕಾಶ್ ಚಂದ್ರ, ಶಿವರಾಜು, ಲಿಂಗಾಯತ ಸಮಾಜದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net