ಮೂಡುಬಿದಿರೆಯಲ್ಲಿ ಚೀಲ ತನ್ನಿ ಇಲ್ಲವೇ ಚೀಲ ಖರೀದಿಸಿ ಅಭಿಯಾನ

New Project
Published on

ಮೂಡುಬಿದಿರೆ: ಇಲ್ಲಿನ ಪುರಸಭೆ ಮತ್ತು ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ, ‘ಪ್ಲಾಸ್ಟಿಕ್ ಚೀಲ ಬೇಡ ಅನ್ನಿ ಬಟ್ಟೆ ಚೀಲ ನೀವು ತನ್ನಿ’ ಅಭಿಯಾನ ಶುಕ್ರವಾರ ಮೂಡುಬಿದಿರೆಯ ಸಂತೆ ಮಾರುಕಟ್ಟೆಯಲ್ಲಿ ನಡೆಯಿತು.

ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಮುಖ್ಯಾಧಿಕಾರಿ ಇಂದು ಎಂ.ಅಭಿಯಾನಕ್ಕೆ ಚಾಲನೆ ನೀಡಿದರು. ಪುರಸಭಾ ಪರಿಸರ ಅಭಿಯಂತೆ ಶಿಲ್ಪಾ ಪ್ರಾಸ್ತಾವಿಕವಾಗಿ ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ತ್ಯಾಜ್ಯ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳಲಾಗಿದೆ. ಮಾರ್ಕೆಟ್‌ಗೆ ಬರುವ ಗ್ರಾಹಕರು ಹಣ ಮಾತ್ರ ತರುತ್ತಿದ್ದು ಚೀಲ ತರದೆ ಪ್ಲಾಸ್ಟಿಕ್ ಚೀಲ ತೆಗೆದುಕೊಳ್ಳುತ್ತಿದ್ದಾರೆ. ಅಂತಹವರಲ್ಲಿ ಬಟ್ಟೆ ಚೀಲ ಬಳಸುವಂತೆ ಪ್ರೇರೇಪಿಸಲಾಗುತ್ತಿದ್ದು, ಬಟ್ಟೆಯ ಎರಡು ಚೀಲಗಳಿಗೆ ಐದು ರೂ. ಮಾತ್ರ ಎಂದರು.

ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರಾದ ಪಿ.ಕೆ.ಥೋಮಸ್, ರೋಟರಿ ಕ್ಲಬ್ ಅಧ್ಯಕ್ಷ ರವಿ ಪ್ರಸಾದ್ ಉಪಾಧ್ಯಾಯ, ಸದಸ್ಯ ಸಿ. ಎಚ್.ಗಫೂರ್, ಮಹಮ್ಮದ್ ಆರಿಫ್, ಜಯರಾಮ್ ಕೋಟ್ಯಾನ್, ಸ್ವಚ್ಛತಾ ರಾಯಭಾರಿ ಸಂಧ್ಯಾ ಭಟ್, ಗೋಪಾಲ್ ಎಂ. ಉಪಸ್ಥಿತರಿದ್ದರು.

ಆಳ್ವಾಸ್ ಕಾಲೇಜಿನ ಬಿ.ಎಸ್.ಡಬ್ಲುೃ, ಎಂ.ಎಸ್.ಡಬ್ಲುೃ, ಪತ್ರಿಕೋದ್ಯಮದ ವಿಭಾಗ ಮತ್ತು ವಾಮದಪದವು ಪದವಿ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಭಾಗವಹಿಸಿ ಜಾಗೃತಿ ಮೂಡಿಸಿದರು ಮತ್ತು ಡೊನೇಷನ್ ಬಾಕ್ಸ್ ಮೂಲಕ ಬಟ್ಟೆ ಚೀಲಕ್ಕಾಗಿ ದೇಣಿಗೆ ಸಂಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net