ಪಠ್ಯೇತರ ಚಟುವಟಿಕೆಗಳಿಗೆ ಶಿಬಿರ ಸಹಕಾರಿ

gan-4
Published on

ಕುಂದಾಪುರ: ಶಿಬಿರದಲ್ಲಿ ಆಟ ಪಾಠಗಳ ಜತೆ, ಮಕ್ಕಳಲ್ಲಿ ಅಧ್ಯಾತ್ಮಿಕ ಜ್ಞಾನ ಬೆಳಗಲು ಪ್ರಯತ್ನಿಸಲಾಗುವುದು. ಈ ಪ್ರಾಯದಲ್ಲಿ ಮಕ್ಕಳಿಗೆ ಅಧ್ಯಾತ್ಮಿಕ ಜ್ಞಾನದ ಅವಶ್ಯಕತೆ ಇದೆ. ಮಕ್ಕಳು ಅನ್ಯಾಯ, ಅನೀತಿಗಳಿಂದ ದೂರವಿರಲು ಇಂಥ ಶಿಬಿರಗಳು ಸಹಕಾರಿ ಎಂದು ಚರ್ಚ್ ಧರ್ಮಗುರು ಪೌಲ್ ರೇಗೊ ಹೇಳಿದರು.

ರೋಜರಿ ಮಾತಾ ಚರ್ಚ್ ಸಭಾಭವನದಲ್ಲಿ ಕುಂದಾಪುರ ರೋಜರಿ ಮಾತಾ ಚರ್ಚ್ ಮತ್ತು ಕ್ರೈಸ್ತ ಶಿಕ್ಷಣ ಆಯೋಗದ ಸಹಕಾರದಿಂದ ಸೋಮವಾರ ಪ್ರಾರಂಭವಾದ ಮೂರು ದಿನಗಳ ಬೇಸಿಗೆ ರಜೆಯ ಅಧ್ಯಾತ್ಮಿಕ ಶಿಬಿರದಲ್ಲಿ ಮಾತನಾಡಿದರು.

ಬಾಲ್ಯ ಮೇರಿ ಮಾತಾ ಸಾಡೆಲಿಟಿಯ ಸಚೇತಕಿ ಸಿಸ್ಟರ್ ಇವ್ಲಾ, ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಶಿಕ್ಷಕಿ ಸೆಲಿನ್ ಬಾರೆಟ್ಟೊ ಉಪಸ್ಥಿತರಿದ್ದರು. ಕ್ರೈಸ್ತ ಶಿಕ್ಷಣ ಆಯೋಗದ ಸಂಚಾಲಕಿ ವೀಣಾ ಡಿಸೋಜಾ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net