

ಬಂಟ್ವಾಳ: ಜೆಸಿಐ ಬಂಟ್ವಾಳ ಆಶ್ರಯದಲ್ಲಿ, ಸ್ವಾಮೀ ವಿವೇಕಾನಂದ ಚಾರಿಟೆಬಲ್ ಟ್ರಸ್ಟ್ ರಾಯಿ ಕೊಯಿಲ, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ರಾಯಿ ಸಹಯೋಗದೊಂದಿಗೆ ಶಾಲೆ ವಿದ್ಯಾರ್ಥಿಗಳ ಪಾಲಕರಿಗಾಗಿ ಅರಿವು ಮಾರ್ಗದರ್ಶನ ಶಿಬಿರ ಮಂಗಳವಾರ ನಡೆಯಿತು.
ರಾಯಿ-ಕೊಯಿಲ-ಅರಳ ಹಿಂದು ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು ಉದ್ಘಾಟಿಸಿದರು. ಜೆಸಿಐ ಬಂಟ್ವಾಳದ ಅಧ್ಯಕ್ಷೆ ರಶ್ಮಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ವಲಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ ಸಂದೀಪ್ ಸಾಲ್ಯಾನ್ ತರಬೇತಿ ನೀಡಿದರು. ರಾಯಿ ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್ ರಾಯಿಬೆಟ್ಟು, ತಾಪಂ ಮಾಜಿ ಸದಸ್ಯ ವಸಂತಕುಮಾರ್ ಅಣ್ಣಳಿಕೆ, ಎಸ್‌ಡಿಎಂಸಿ ಅಧ್ಯಕ್ಷ ಹರೀಶ್ ಆಚಾರ್ಯ ರಾಯಿ, ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಸಮಿತ್ ಶಿವನಗರ, ವಿವೇಕಾನಂದ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮಧುಕರ ಬಂಗೇರ, ಜೆಸಿಐ ಮಾಜಿ ವಲಯ ಉಪಾಧ್ಯಕ್ಷ ನಾರಾಯಣ ಬಲ್ಯ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಜಾನೆಟ್ ಕೊನ್ಸೆಸೊ ಸ್ವಾಗತಿಸಿದರು, ಸಹಶಿಕ್ಷಕಿ ಬೇಬಿ ಅರಳ ವಂದಿಸಿ. ಜೆಸಿಐ ಬಂಟ್ವಾಳ ನಿಕಟಪೂರ್ವಾಧ್ಯಕ್ಷ ರಾಜೇಂದ್ರ ಕೆ.ಕಾರ್ಯಕ್ರಮ ನಿರೂಪಿಸಿದರು.