ಮಕ್ಕಳಿಗೆ ಸಂಸ್ಕೃತಿ ತಿಳಿವಳಿಕೆ ಅಗತ್ಯ : ಸಂಸ್ಕಾರ ಶಿಬಿರ ಸಮಾರೋಪದಲ್ಲಿ ವಾಮನ ಅನಿಸಿಕೆ

25
Published on

ಕೊಕ್ಕಡ: ಸಂಸ್ಕಾರವಿಲ್ಲದ ಮಕ್ಕಳು ಮನೆಗೆ ಮಾತ್ರವಲ್ಲದೇ ಸಮಾಜಕ್ಕೂ ಹೊರೆಯಾಗುತ್ತಾರೆ. ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕೃತಿ ಕುರಿತು ತಿಳಿವಳಿಕೆ ನೀಡಬೇಕು ಎಂದು ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಪ್ರಾಥಮಿಕ ಶಾಲೆ ಸಂಚಾಲಕ ವಾಮನ ತಾಮ್ಹನ್‌ಕರ್ ಹೇಳಿದರು.

ಅರಸಿನಮಕ್ಕಿಯಲ್ಲಿ ನವಭಾರತ ಸಂಘಟನೆಯ ಆಶ್ರಯದಲ್ಲಿ ಭಾನುವಾರ ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಿವೇದಿತಾ ಮಾತಾಜಿ ಬೌದ್ಧಿಕ್ ನೀಡಿದರು. ವಿಶ್ವ ಹಿಂದು ಪರಿಷತ್ ಜಿಲ್ಲಾ ಮುಖಂಡ ನವೀನ್ ನೆರಿಯ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಾಘವೇಂದ್ರ ನಾಯಕ್, ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ದಾನಿ ಸುಂದರ ರಾಣ್ಯ ಶುಭಹಾರೈಸಿದರು.

ಬೂಡುಮುಗೇರಿನ ಅನಾರೋಗ್ಯ ಪೀಡಿತೆ ರತ್ನಾ ಅವರಿಗೆ ಧನಸಹಾಯ ಹಸ್ತಾಂತರಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಅರಸಿನಮಕ್ಕಿ ಗ್ರಾಪಂ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್ ಅಧ್ಯಕ್ಷತೆ ವಹಿಸಿದ್ದರು. ಶ್ರೀರಂಗ ದಾಮ್ಲೆ, ಆರೆಸ್ಸೆಸ್ ಸ್ವಯಂಸೇವಕ ಯೋಗೀಶ್ ಕುಮಾರ್ ಉಪಸ್ಥಿತರಿದ್ದರು.ಗಣೇಶ್ ಹೊಸ್ತೋಟ ಸ್ವಾಗತಿಸಿದರು. ಮಾಲತಿ ಮಾತಾಜಿ ವಂದಿಸಿದರು. ಸುಮಾ ಸಂಜಯ್ ಕಾರ್ಯಕ್ರಮ ನಿರೂಪಿಸಿದರು. ದಾನಿಗಳು, ನವಭಾರತ ಸಂಘಟನೆ ಸದಸ್ಯರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net