

ಚನ್ನಪಟ್ಟಣ
ನಗರದ ಕುಡಿನೀರು ಕಟ್ಟೆಯ ಬಳಿ ರಸ್ತೆ ಬದಿಯಲ್ಲಿ ಕಸ ಹಾಕಿ ಅದಕ್ಕೆ ಬೆಂಕಿ ಹಾಕುತ್ತಿದ್ದವರ ಪತ್ತೆಗಾಗಿ ನಗರಸಭೆ ವತಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ನಗರದ ಕುಡಿನೀರುಕಟ್ಟೆ ಬಳಿ ಬೆಂಗಳೂರು& ಮೈಸೂರು ಹೆದ್ದಾರಿ ಬದಿಯಲ್ಲೆ ಹಲವು ದಿನಗಳಿಂದ ತ್ಯಾಜ್ಯ ತಂದು ಹಾಕಲಾಗುತಿತ್ತು. ಇದರೊಂದಿಗೆ, ಕಸಕ್ಕೆ ಬೆಂಕಿ ಹಾಕುವ ಕೆಲಸಗಳು ನಡೆಯುತ್ತಿದ್ದವು. ಈ ಜಾಗದಲ್ಲಿ ಕಸ ಹಾಕುವುದನ್ನು ತಡೆಗಟ್ಟುವುದು ಸಾಧ್ಯವಾಗಿರಲಿಲ್ಲ. ಕಸಕ್ಕೆ ಬೆಂಕಿ ಹಚ್ಚುವ ಹಿನ್ನೆಲೆಯಲ್ಲಿ ಉತ್ಪತ್ತಿಯಾಗುವ ಹೊಗೆಯಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯೂ ಆಗುತಿತ್ತು. ಎಷ್ಟೇ ಪ್ರಯತ್ನಪಟ್ಟರೂ ಈ ಜಾಗದಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಗರಸಭೆಯಿಂದ ಈ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಕುಡಿನೀರುಕಟ್ಟೆ ಬಳಿ ಪ್ರಾಯೋಗಿಕವಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಕೆಲವೆಡೆ ಅಳವಡಿಸುವ ಯೋಜನೆ ನಗರಸಭೆಯದ್ದಾಗಿದೆ. ಈ ಮೂಲಕ ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದು ನಗರಸಭೆಯ ಉದ್ದೇಶವಾಗಿದೆ.
ವಾಸಿಲ್ ಆಲಿಖಾನ್, ನಗರಸಭೆ ಅಧ್ಯಕ್ಷ
ಕಸ ಹಾಕಲು ಜಾಗದ ಸಮಸ್ಯೆ ಇತ್ತು. ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಶಾಸಕ ಸಿ.ಪಿ ಯೋಗೇಶ್ವರ್ ಅವರೊಂದಿಗೆ ಚರ್ಚಿಸಿ ಸದ್ಯಕ್ಕೆ ಕಸ ಹಾಕುವ ಜಾಗ ಪತ್ತೆ ಮಾಡಲಾಗಿದೆ. ಸದ್ಯಕ್ಕೆ ಕಸ ವಿಲೇವಾರಿ ಮಾಡಲು ಸ್ಥಳದ ಸಮಸ್ಯೆ ಇಲ್ಲ. ಸಾರ್ವಜನಿಕರು ನಿಮ್ಮ&ನಿಮ್ಮ ಮನೆಗಳಲ್ಲಿ ಹಸಿ ಕಸ ಮತ್ತು ಒಣಗಿದ ಕಸವನ್ನು ಬೇರ್ಪಡಿಸಿ ನಗರಸಭೆ ವಾಹನ ಮನೆಯ ಮುಂದೆ ಬಂದಾಗ ಹಾಕಬೇಕು.