

ಮಾಗಡಿ: ತಾಲೂಕಿನ ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಿಕೊಳ್ಳಲು ಸಂಟಿತ ಹೋರಾಟ ಹಮ್ಮಿಕೊಳ್ಳಬೇಕು ಎಂದು ಗುಡೇಮಾರನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಲಕ್ಷಿ$್ಮನಾರಾಯಣ ಮೂರ್ತಿ ನೇತೃತ್ವದಲ್ಲಿ ಕನ್ನಡ ಹಾಗೂ ರೈತ ಪರ ಸಂಟನೆಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರಾಜ್ಯ ಕಟ್ಟಡ ಮತ್ತು ಅಸಂಟಿತ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನಗೌಡ ಮಾತನಾಡಿ, ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಹೋಬಳಿ ನೆಲಮಂಗಲ ಸೇರಿದರೆ ರಾಜಕೀಯ ಮತ್ತು ರಿಯಲ್ ಎಸ್ಟೇಟ್ದಾರರಿಗೆ ಅನುಕೂಲ ಹೊರತು ರೈತ, ಬಡವರು, ವಿದ್ಯಾರ್ಥಿಗಳಿಗಲ್ಲ. ಹಾಗಾಗಿ ಹೋಬಳಿಯನ್ನು ನೆಲಮಂಗಲಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಶ್ರೀದಲ್ಲೇ ಮಠಾಧ್ಯಕ್ಷರು, ಹಾಗೂ ವಿವಿಧ ಸಂಟನೆಗಳು ಹಾಗೂ ಚಿಂತಕರ ಸಹಯೋಗದಲ್ಲಿ ಬೃಹತ್ ಹೋರಾಟ ರೂಪಿಸಲಾಗುವುದು. ಇನ್ನು ಶಾಸಕ ಬಾಲಕೃಷ್ಣ ಸಹ ಹೋರಾಟಕ್ಕ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಹಾಗಾಗಿ ಮಾಗಡಿಯಿಂದ ಸೋಲೂರುವರೆಗೂ ಪಾದಯಾತ್ರೆ ನಡೆಸಿ, ಸೋಲೂರಿನಲ್ಲಿ ರಸ್ತೆ ತಡೆ ಮೂಲಕ
ಸರ್ಕಾರರವನ್ನು ಎಚ್ಚರಿಸಲಾಗುವುದು ಎಂದರು.
ಕೆಂಪೇಗೌಡ ರೈತ ಸಂಟನೆಯ ಯುವ ಅಧ್ಯಕ್ಷ ಜುಟ್ನಹಳ್ಳಿ ಆರ್.ದಿನೇಶ್ ಮಾತನಾಡಿ, ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವುದೇಕೆ? ರಾಜ್ಯದಲ್ಲಿ 135 ಹೋಬಳಿಗಳು ಇದೇ ರೀತಿಯಲ್ಲಿರುವಾಗ ಸೋಲೂರನ್ನೇ ಬೇರ್ಪಡಿಸುವುದೇಕೆ? ಸೋಲೂರನ್ನು ಮಾಗಡಿಯಲ್ಲೇ ಉಳಿಸುವಂತೆ ಸೆ.22ರಂದು ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದರು.
ನಮ್ಮ ಕರ್ನಾಟಕ ನವನಿರ್ಮಾಣ ವೇದಿಕೆ ಅಧ್ಯಕ್ಷ ರಾಜಣ್ಣ ಮಾತನಾಡಿ, ಸೋಲೂರು ಹೋಬಳಿಯನ್ನು ಮಾಗಡಿಯಲ್ಲಿ ಉಳಿಸದಿದ್ದರೆ ಸೋಲೂರಿನಿಂದ 5 ಸಾವಿರ ಮಂದಿಯೊಂದಿಗೆ ಪಾದಯಾತ್ರೆ ಮೂಲಕ ಸಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂಬ ಎಚ್ಚರಿಕೆ ನೀಡಿದರು.
ಗುಡೇಮಾರನಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಲಕ್ಷಿ$್ಮನಾರಾಯಣ ಮೂರ್ತಿ ಮಾತನಾಡಿ, ಸೋಲೂರು ಹೋಬಳಿ ಜನರಿಗೆ ಮಾಗಡಿ ಹತ್ತಿರದ ತಾಲೂಕು. ಸರ್ಕಾರಿ ಕೆಲಸಕಾರ್ಯಗಳು ವೇಗವಾಗಿ ನಡೆಯುತ್ತವೆ. ಆದರೆ ನೆಲಮಂಗಲಕ್ಕೆ ಸೇರಿದರೆ, ಆ ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ 80 ಕಿಮೀ ದೂರದ ದೇವನಹಳ್ಳಿಗೆ ತೆರಳಬೇಕು. ಇದು ಜನಸಾಮಾನ್ಯರಿಗೆ ಕಷ್ಟಸಾಧ್ಯ. ಹಾಗಾಗಿ ಅವೈಜ್ಞಾನಿಕ ನಿರ್ಧಾರವನ್ನು
ಸರ್ಕಾರ ಕೈ ಬಿಡಬೇಕು ಎಂದು ಒತ್ತಾಯಿಸಿದರು.