ದೇವೇಗೌಡರನ್ನ ಕರೆಸಿ ಆಣೆ ಮಾಡಿಸ್ತಾರಾ ಕೇಳ್ರಿ.....ಬಾಲಕೃಷ್ಣ ಪ್ರಶ್ನೆ

Balakrishna
Published on

ರಾಮನಗರ

ಏಯ್..ಥೂ. ಅವರ ಬಾಲಿಷ ಹೇಳಿಕೆಗೆ ಉತ್ತರ ಕೊಡಲ್ಲ ನಡಿಯಪ್ಪಾ.!

ಅದೇನ್ ಮಾಜಿ ಸಿಎಂ ಆಗಿ ಚಿಲ್ಲರೆ ತರ ಮಾತನಾಡ್ತಾರೆ. ಸರಿಯಾಗಿ ತೂಕವಾಗಿ ಮಾತನಾಡಲು ಹೇಳಿ. ಇದು ಸಿಎಂ, ಡಿಸಿಎಂ ಹಾಗೂ ಸಚಿವರು ಐದು ತಿಂಗಳಿಂದ ಹಣ ತಿಂದಿಲ್ಲ ಎಂದು ಆಣೆ ಮಾಡಲಿ ಎಂಬ ಎಚ್ ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಮಾಗಡಿ ಶಾಸಕ ಬಾಲಕೃಷ್ಣ ನೀಡಿದ ಪ್ರತಿಕ್ರಿಯೆ.

ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರನ್ನ ಕರೆಸಿ ಆಣೆ ಮಾಡಿಸ್ತಾರಾ ಕೇಳ್ರಿ. ದೇವೇಗೌಡರು ದುಡ್ಡು ತಿಂದಿಲ್ಲ ಅಂತ ಬಂದು ಪ್ರಮಾಣ ಮಾಡ್ತಾರಾ.? ಎರಡು ಬಾರಿ ಸಿಎಂ ಆದವರು ಸಮಯೋಚಿತವಾಗಿ ಮಾತನಾಡಬೇಕು.

ಸರಿ ನಾವೆಲ್ಲಾ ಕಳ್ಳರೇ..ಒಪ್ಕೊತೀವಿ, ನಾವೆಲ್ಲಾ ತಿಂದಿದ್ದೀವಿ.! ಹಾಗಿದ್ರೆ ನಾನು ಸತ್ಯ ಹರಿಶ್ಚಂದ್ರ, ನಾವೇನು ತಿಂದಿಲ್ಲ ಅಂತ ಬಂದು ಆಣೆ ಮಾಡಿ.

ನೀವ್ ಬಂದು ಆಣೆ ಮಾಡಿ ಅಂದ್ರೆ ಅವರನ್ನ ಕರಿರಿ, ಇವರನ್ನ ಕರಿರಿ ಅನ್ನೊದಲ್ಲ. ನೀವು ಮೋದಿ ಕರಿರಿ ಅಂದ್ರೆ ಕರೆಯೋಕಾಗುತ್ತಾ.?

ಒಬ್ಬ ಮಾಜಿ ಮುಖ್ಯಮಂತ್ರಿ ಈ ರೀತಿ ಮಾತನಾಡಬಾರದು. ನಾನು ಹೇಳಿರೋದು ನಿಮ್ಮ ಕುಟುಂಬದವರು ತಿಂದಿಲ್ವಾ.? ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net