ಸಾಲ ವಸೂಲಿ ಹೆಸರಲ್ಲಿ ಕಿರುಕುಳ: ಮೈಕ್ರೊಫೈನಾನ್ಸ್​ಗೆ ಬ್ರೇಕ್​ ಹಾಕಲು ಸುಗ್ರೀವಾಜ್ಞೆಗೆ ಸಚಿವ ಸಂಪುಟ ಅಸ್ತು! Microfinance

Microfinance
Published on

Microfinance : ಜನರಿಗೆ ಸಾಲ ನೀಡಿ, ವಸೂಲಿ ಹೆಸರಲ್ಲಿ ಕಿರುಕುಳ ನೀಡುತ್ತಿರುವ ಮೈಕ್ರೊಫೈನಾನ್ಸ್​ಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಫೈನಾನ್ಸ್​ಗಳ ಹಾವಳಿಗೆ ಬ್ರೇಕ್​ ಹಾಕುವ ಸುಗ್ರೀವಾಜ್ಞೆಗೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

ಈ ಬಗ್ಗೆ ಮಾತನಾಡಿದ ಕಾನೂನು ಸಚಿವ ಎಚ್​.ಕೆ. ಪಾಟೀಲ್​, ಮೈಕ್ರೊಫೈನಾನ್ಸ್ ವಿಚಾರದಲ್ಲಿ ಮಸೂದೆ ತರಲು ಉದ್ದೇಶಿಸಲಾಗಿದೆ. ಸಂಜೆ ಸಿಎಂ‌ ಸಿದ್ದರಾಮಯ್ಯ ಅವರು ಹಿರಿಯ ಸಚಿವರ ಸಭೆ ಕರೆದಿದ್ದಾರೆ. ಈ ವಿಷಯ ಅಂತಿಮಗೊಳಿಸಲು ಹಾಗೂ ಮಹತ್ವದ ಸಲಹೆಗಳು ಇರುವುದರಿಂದ ಎಲ್ಲವನ್ನು ಪರಿಗಣಿಸಿ, ಚರ್ಚಿಸಿ, ಅಂತಿಮಗೊಳಿಸಲು ನಿರ್ಧರಿಸಿದ್ದಾರೆ ಎಂದರು.

ಮೈಕ್ರೊಫೈನಾನ್ಸ್ ಪ್ರತಿನಿಧಿ, ರಿಸರ್ವ್ ಬ್ಯಾಂಕ್ ಜತೆಗೂ ಸಮಾಲೋಚನೆ ನಡೆಸಲಾಗಿದೆ. ಮಸೂದೆಯ ಕರಡು ಕೂಡ ಸಿದ್ಧವಾಗಿದೆ. ಆದರೆ, ಕೆಲವು ತಾಂತ್ರಿಕ ಸಮಸ್ಯೆ ಇದೆ. ಹೊಸ‌ ಮಸೂದೆಗೆ ಕೆಲವು ಕಾನೂನು ಅಡ್ಡಿಯಾಗುತ್ತದೆಯೇ‌ ಎಂದು ನೋಡಬೇಕಿದೆ. ಮಸೂದೆ ಅಂತಿಮಗೊಳಿಸಲು ಸಿಎಂಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಾಲ ತೆಗೆದುಕೊಂಡ ರೈತರು, ಕಾರ್ಮಿಕರು, ಚಿಕ್ಕ ಅತಿ ಚಿಕ್ಕ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳ ಸಾಲ ವಸೂಲಿ ಪ್ರಕ್ರಿಯೆಯಲ್ಲಿ ನಡೆದ ಕೆಲವು ಘಟನೆಗಳು ಗಂಭೀರವಾದ ಹಾಗೂ ಒಪ್ಪದಂತಿದೆ. ಜನ‌ ತೊಂದರೆಗೆ ಸಿಲುಕಿದ್ದಾರೆ. ಅಮಾನವೀಯ ಸಾಲ ವಸೂಲಿ ನಡೆದಿದೆ ಎಂಬ ದೂರುಗಳು ಬರುತ್ತಿವೆ. ಇಂದೂ ಸಹ ಆತ್ಮಹತ್ಯೆ ಪ್ರಕರಣ ನಡೆದಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net