

ಜೇವರ್ಗಿಯಲ್ಲಿ ಸರ್‌ಸಿ.ವಿ.ರಾಮನ್‌ರ ೧೩೬ನೇ ಜನ್ಮದಿನಾಚರಣೆ
ಜೇವರ್ಗಿ: ಬೆಳಕಿನ ಚದುರುವಿಕೆಯ ಬಗ್ಗೆ ವ್ಯಾಪಕ ಸಂಶೋಧನೆ ಮಾಡಿ ವಿಜ್ಞಾನ ಕ್ಷೇತ್ರಕ್ಕೆ ನೋಬೆಲ್ ಪ್ರಶಸ್ತಿ ದೊರಕಿಸಿಕೊಟ್ಟ ಸರ್.ಸಿ.ವಿ.ರಾಮನ್‌ರ ಕೊಡುಗೆ ಅನನ್ಯವಾಗಿದೆ. ತಮ್ಮ ‘ರಾಮನ್ ಪರಿಣಾಮ’ದ ಮೂಲಕ ಸಮುದ್ರದ ನೀಲಿ ಬಣ್ಣಕ್ಕೆ ಬೆಳಕಿನ ಚದುರುವಿಕೆಯ ಕಾರಣವೆಂದು ತೋರಿಸಿದರು ಎಂದು ಭೌತಶಾಸ್ತç ಉಪನ್ಯಾಸಕ ಶಂಕ್ರೆಪ್ಪ ಹೊಸದೊಡ್ಡಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಭೌತಶಾಸ್ತç ವಿಭಾಗದ ವತಿಯಿಂದ ಗುರುವಾರ ಜರುಗಿದ ‘ಸರ್ ಸಿ.ವಿ.ರಾಮನ್‌ರ ೧೩೬ನೇ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ.ಬಟಗೇರಿ ಮಾತನಾಡಿ, ಯಾವುದೇ ರಾಷ್ಟçದ ಅಭಿವೃದ್ದಿ, ಆ ರಾಷ್ಟçದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಮೇಲೆ ನಿಂತಿದೆ. ರಷ್ಯಾ, ಅಮೇರಿಕ ಸೇರಿದಂತೆ ಮುಂತಾದ ಸುಪರ್ ಪವರ್ ರಾಷ್ಟçಗಳು ಇಂದು ಆ ಮಟ್ಟಕ್ಕೆ ಬೆಳೆಯಬೇಕಾದರೆ, ಆ ರಾಷ್ಟçದಲ್ಲಿ ವಿಜ್ಞಾನ ಉತ್ತಂಗ ಶಿಖರವನ್ನು ತಲುಪಿದೆ. ನಮ್ಮ ದೇಶದ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸಿ.ವಿ.ರಾಮನ್‌ರು ಅವಿಸ್ಮರಣೀಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಆಸ್ಮಾ ಜಬೀನ್,ನಯಿಮಾ ನಾಹಿದ್, ಮಲ್ಲಪ್ಪ ರಂಜಣಗಿ, ಲಿಂಗರಾಜ ಹಿರೇಗೌಡ್, ರೇಣುಕಾ ಚಿಕ್ಕಮೇಟಿ, ಕೀರ್ತಿ ಬುಜುರಕೆ, ದ್ವಿ.ದ.ಸ ರಾಮಚಂದ್ರ ಚವ್ಹಾಣ, ಪತ್ರಕರ್ತ ವಿಜಯಕುಮಾರ ಕಲ್ಲಾ ಹಾಗೂ ವಿದ್ಯಾರ್ಥಿಗಳಿದ್ದರು.