ಗ್ಯಾರಂಟಿ ಬಿಟ್ಟಿ ಭಾಗ್ಯವಲ್ಲ ಬಡವರಿಗೆ ಸೌಭಾಗ್ಯ

0104Klb08
Published on

ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ರಾಜ್ಯ ಸರ್ಕಾರದಿಂದ ಬಡವರಿಗೆ ನೀಡುತ್ತಿರುವ ಐದು ಗ್ಯಾರಂಟಿಗಳ ಬಗ್ಗೆ ಕೆಲವರು ಬಿಟ್ಟಿ ಕೊಡುಗೆ ಎಂದು ಹಗುರವಾಗಿ ಮಾತನಾಡುತ್ತಿದ್ದಾರೆ. ಅವು ಬಿಟ್ಟಿ ಭಾಗ್ಯಗಳಲ್ಲ, ಸಂಕಷ್ಟದಲ್ಲಿರುವವರ ಪಾಲಿಗೆ ಸೌಭಾಗ್ಯವಾವೆ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ ಹೇಳಿದರು.
ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ಬಡ ಕುಟುಂಬವರು ತಿಂಗಳಿಗೆ ನಾಲ್ಕೆÊದು ಸಾವಿರ, ವಾರ್ಷಿಕ ೫೦-೬೦ ಸಾವಿರ ರೂ. ನೇರ ಸೌಲಭ್ಯ ಪಡೆಯುತ್ತಿವೆ. ಜಾತಿ, ಮತ ಭೇದವಿಲ್ಲದೆ ತಲುಪುತ್ತಿರುವುದು ದೇಶದಲ್ಲೇ ಮೊದಲು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.
ಗ್ಯಾರಂಟಿಗಳು ೧.೨ ಕೋಟಿ ಕುಟುಂಬಗಳನ್ನು ಬಡತನದಿಂದ ಮೇಲೆತ್ತಲಿವೆ. ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಮಾದರಿ ಯೋಜನೆ ಇದಾಗಿದ್ದು, ವಿದೇಶಗಳಲ್ಲೂ ಇಂತಹ ಯೋಜನೆಗಳು ಜಾರಿಯಲ್ಲಿವೆ. ಕಾನೂನಿನ ರಾಜನೀತಿ ನಿರ್ದೇಶಕ ತತ್ವಗಳ ಆಶಯ ಸರ್ವರಿಗೂ ಆಹಾರ, ಉದ್ಯೋಗ ಸೇರಿ ಕನಿಷ್ಠ ಸೌಲಭ್ಯ ಒದಗಿಸುವುದೇ ಆಗಿದೆ. ಅದನ್ನು ಗ್ಯಾರಂಟಿ ಯೋಜನೆಗಳು ಹೊಂದಿವೆ ಎಂದರು.
ಕಾAಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಪ್ರಮುಖರಾದ ಸುನೀಲ ಮಾನ್ಪಡೆ, ನಾಗರಾಜ, ಭೀಮರಾವ ಇತರರಿದ್ದರು.


ದೇಶದಲ್ಲಿ ನೀರವ್ ಮೋದಿ, ವಿಜಯ ಮಲ್ಯ ಸೇರಿ ಹಲವರು ೪೦ ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡದೆ ಗ್ಯಾರಂಟಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಹಸಿವಿನಿಂದ ಬಳಲುವ ೧೨೫ ರಾಷ್ಟçಗಳ ಪಟ್ಟಿಯಲ್ಲಿ ಭಾರತ ೧೧೧ನೇ ಸ್ಥಾನದಲ್ಲಿದೆ. ಆಹಾರ, ವಸತಿ, ಆರೋಗ್ಯ, ಉದ್ಯೋಗ ಕಡ್ಡಾಯವಾಗಿ ಕೊಡಬೇಕು. ಗ್ಯಾರಂಟಿಗಳನ್ನು ಕಾನೂನು ಬದ್ಧವಾಗಿ ನೀಡಲಾಗುತ್ತಿದೆ.
| ಡಾ.ಸಿ.ಎಸ್. ದ್ವಾರಕನಾಥ
ಅಧ್ಯಕ್ಷ, ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net